ಸುರೇಶ್ ಕುಮಾರ್ 
ರಾಜ್ಯ

ನಾಳೆಯಿಂದ ವರ್ಗಾವಣೆ ಕೌನ್ಸೆಲಿಂಗ್ ಪುನರಾರಂಭ : ಸುರೇಶ್ ಕುಮಾರ್ 

ವಿವಿಧ ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪುನಾರಂಭಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸಚಿವ ಸುರೇಶ್​ ಕುಮಾರ್​  ಸೂಚನೆ ನೀಡಿದ್ದಾರೆ.  

ಬೆಂಗಳೂರು:ವಿವಿಧ ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪುನಾರಂಭಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸಚಿವ ಸುರೇಶ್​ ಕುಮಾರ್​  ಸೂಚನೆ ನೀಡಿದ್ದಾರೆ.
  
ನಗರದ ಶಿಕ್ಷಕರ ಸದನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾತ್ಕಾಲಿಕವಾಗಿ ನಿಲ್ಲಿಸಿದ್ದ ಕಡ್ಡಾಯ ಮತ್ತು ಪರಸ್ಪರ ವರ್ಗಾವಣೆಗೆ ನಾಳೆಯಿಂದ ಕೌನ್ಸೆಲಿಂಗ್ ಆರಂಭವಾಗಲಿದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.
  
ಕಡ್ಡಾಯ ವರ್ಗಾವಣೆ ಪ್ರಕ್ರಿಯೆಗೆ ಕೋರ್ಟ್​ನಲ್ಲಿ ತಡೆ ನೀಡಿಲ್ಲ. 2007ರ ನಿಯಮದಂತೆ ಕಡ್ಡಾಯ ವರ್ಗಾವಣೆ ಮಾಡಲಿದ್ದೇವೆ. ಈವರೆಗೆ 16066 ಶಿಕ್ಷಕರ ವರ್ಗಾವಣೆ ಆಗಿದ್ದು, ಪ್ರಾಥಮಿಕ ಶಾಲಾ ವಿಭಾಗದಲ್ಲಿ ರಾಜ್ಯದಲ್ಲಿ ವರ್ಗಾವಣೆಗೆ ಅರ್ಹರಾಗುವುದು 4084 ಮಂದಿ. 713 ಹುದ್ದೆಗಳು ಬಿ/ಸಿ ವಲಯದಲ್ಲಿ ಕೊರತೆಯಾಗಲಿದೆ. ಪ್ರೌಢ ಶಾಲೆ ವಿಭಾಗದಲ್ಲಿ 1,234 ಶಿಕ್ಷಕರಲ್ಲಿ ವಿಷಯವಾರು 345 ಹುದ್ದೆಗಳು ಬಿ/ಸಿ ವಲಯದಲ್ಲಿ ಕೊರತೆಯಾಗಲಿದೆ  ಎಂದರು.

ಒಟ್ಟಾರೆ 1,058 ಶಿಕ್ಷಕರಿಗೆ ವಿಷಯ ಮಾಧ್ಯಮಗಳ ಹುದ್ದೆಗಳ ಕೊರತೆಯಾಗುವುದರಿಂದ ಈ ಶಿಕ್ಷಕರು ಸಹ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ಪಡೆಯುತ್ತಾರೆ. ಒಟ್ಟಾರೆ 1058 ಜನ ಈ ಬಾರಿ ವರ್ಗಾವಣೆ ಆಗುವುದಿಲ್ಲ. ಉಳಿದಂತೆ 4,260 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರು ಮಾತ್ರ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಗೆ ಒಳಪಡಲಿದ್ದಾರೆ ಎಂದು ಸುರೇಶ್​ ಕುಮಾರ್​  ತಿಳಿಸಿದರು.

  2017 ರಲ್ಲಿಯೇ ಕಡ್ಡಾಯ ವರ್ಗಾವಣೆ ಕಾಯ್ದೆ ಜಾರಿಗೆ ತರಲಾಗಿದೆ. ಅಂದು ಕಾನೂನಾತ್ಮಕವಾಗಿ ಸಮಸ್ಯೆಗಳನ್ನು ಚೆರ್ಚಿಸಿ ತಿದ್ದುಪಡಿ ಮಾಡಿದ್ದರೆ ಈ ಸಮಸ್ಯೆ ಉದ್ಬವಿಸುತ್ತಿರಲಿಲ್ಲ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ಮಾಡದೆ ಇದ್ದರೆ ಶಿಕ್ಷಕರಿಗೆ ನ್ಯಾಯ ಒದಗಿಸಲು ಸಾದ್ಯವಾಗುವುದಿಲ್ಲ ಎಂದೆನಿಸುತ್ತಿದೆ. ವರ್ಗಾವಣೆಯಲ್ಲಿ ಕಡ್ಡಾಯ ಎನ್ನುವ ಪದವೇ ಒಂದು  ರೀತಿಯ ಶಿಕ್ಷೆಯಾಗಿದ್ದು, ಕಾಯ್ದೆಗೆ ಅಗತ್ಯವಾದ ತಿದ್ದುಪಡಿ ತೀರ್ಮಾನಿಸಲಾಗಿದೆ ಎಂದರು.

ಇಷ್ಟ ಪಟ್ಟು ಹುದ್ದೆಗೆ ಯಾರು ಹೋಗುತ್ತಾರೆ ಅವರು ಉತ್ತಮವಾಗಿ ಕೆಲಸ ಮಾಡುತ್ತಾರೆ. ಆದರೆ ಕೆಲ ಶಿಕ್ಷಕರು ದೊಡ್ಡ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಅದರಲ್ಲಿ ಕಡ್ಡಾಯದ ಸಮಸ್ಯೆ ಬೇರೆಯದೇ ಇದೆ.ಹೀಗಾಗಿ ಶಿಕ್ಷಕರ ಕಡ್ಡಾಯ ವರ್ಗಾವಣೆ ತಿದ್ದುಪಡಿ ಕಾಯ್ದೆಗೆ ತಿದ್ದುಪಡಿಯನ್ನು ಆದಷ್ಟು ಶೀಘ್ರವಾಗಿ ತರಲಾಗುವುದು ಎಂದರು.
 
 ಕಡ್ಡಾಯ ವರ್ಗಾವಣೆ ನಾಳೆಯಿಂದ ಆರಂಭವಾಗಲಿದ್ದು ಜೊತೆಗೆ ಅವರಿಗೆ ಕೆಲವೊಂದು ಅವಕಾಶ ನೀಡಲಾಗುತ್ತದೆ. ಶಿಕ್ಷಕರಿಗೆ ಯಾವುದು ಸೂಕ್ತ ಯಾವುದು, ಹತ್ತಿರ ಎಂಬುದನ್ನೇ ಅವರೇ ಆಯ್ಕೆ ಮಾಡಿ ತಿಳಿಸಬಹುದು ಎಂದರು.
 
 ಮುಂದಿನ ವರ್ಷದಿಂದ‌ ನಡೆಯುವ ವರ್ಗಾವಣೆ ಪ್ರಕ್ರಿಯೆಯನ್ನು 2020ರ ಏಪ್ರಿಲ್ ಒಳಗೆ ಮುಗಿಸುತ್ತೇವೆ. ಜತೆಗೆ ಕಡ್ಡಾಯ ವರ್ಗಾವಣೆ ಕಾಯಿದೆಗೂ ತಿದ್ದುಪಡಿ ತರುತ್ತೇವೆ. ಅಕ್ಟೋಬರ್ ಒಳಗೆ 10 ಸಾವಿರ  ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೇಮಕಾತಿ ಪತ್ರ ವಿತರಣೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT