ರಾಜ್ಯ

ತುಂಗಭದ್ರಾ ಅಣೆಕಟ್ಟಿನಿಂದ ನೀರು ಬಿಡುಗಡೆ; ಮುಳುಗಿದ ಹಂಪಿ ಸ್ಮಾರಕಗಳು 

Sumana Upadhyaya

ಬಳ್ಳಾರಿ: ತುಂಗಭದ್ರಾ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿರುವುದರಿಂದ ಹಂಪಿ ಸ್ಮಾರಕಗಳು ಮತ್ತೆ ನೀರಿನಲ್ಲಿ ಮುಳುಗಿಹೋಗಿದೆ. 


ಮಳೆ ಕಡಿಮೆಯಾಗಿ ಪ್ರವಾಹ ತಗ್ಗಿದ ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ ಎಂದು ರೈತರು ನಿರಾಳ ಭಾವ ಕಾಣುತ್ತಿರುವ ಸಂದರ್ಭದಲ್ಲಿ ತುಂಗಭದ್ರಾ ಅಣೆಕಟ್ಟಿನಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಭರ್ತಿಯಾಗಿರುವುದನ್ನು ಖಚಿತಪಡಿಸಿದ ನಂತರ ಅಧಿಕಾರಿಗಳು ನಿನ್ನೆ 66 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಿದ್ದಾರೆ. ಇಂದು ಬೆಳಗ್ಗಿನ ಹೊತ್ತಿಗೆ 1 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆಯಾಗಿರುವ ಸಾಧ್ಯತೆಯಿದೆ.


ತೀರ ಪ್ರದೇಶಗಳಲ್ಲಿ ಸಾಕಷ್ಟು ಮಳೆಯಾಗಿರುವುದರಿಂದ ಜಲಾಶಯ ಭರ್ತಿಯಾಗಿದೆ. ಅದರ ಸಮತೋಲನ ಕಾಪಾಡಬೇಕಿದೆ. ಹರಿಯುತ್ತಿರುವ ನೀರನ್ನು ಬಿಡಬೇಕಾಗಿದೆ ಎಂದು ತುಂಗಭದ್ರಾ ಅಣೆಕಟ್ಟೆಯ ಮುಖ್ಯ ಎಂಜಿನಿಯರ್ ಮಂಜಪ್ಪ ತಿಳಿಸಿದ್ದಾರೆ.
ನೀರು ಬಿಡುಗಡೆಯಾದರೆ ಅದರಿಂದ ಮೊದಲು ತೊಂದರೆಯಾಗುವುದು ಹಂಪಿ ವಿಶ್ವ ಪರಂಪರಿಕ ತಾಣ. ಅಲ್ಲಿನ ಹಲವು ಸ್ಮಾರಕಗಳು ನೀರಿನಲ್ಲಿ ಮುಳುಗಡೆಯಾಗಲಿವೆ. ಪುರಂದರ ಮಂಟಪ ನೀರಿನಲ್ಲಿ ಮುಳುಗಡೆಯಾಗಿದೆ. ಕೋದಂಡರಾಮ ದೇವಸ್ಥಾನದ ಹತ್ತಿರ ನೀರು ತುಂಬಿದ್ದು ಅದು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.


ತಿಂಗಳೊಳಗೇ ನೀರು ಎರಡನೇ ಬಾರಿ ಬಿಡುಗಡೆಯಾಗುತ್ತಿರುವುದು ಇದು ಎರಡನೇ ಸಲ. 

SCROLL FOR NEXT