ರಾಜ್ಯ

ಕೆಎಸ್‌ಪಿಸಿಬಿ ಅಧ್ಯಕ್ಷರಾಗಿ ಡಾ.ಸುಧಾಕರ್: ನೇಮಕ ನಿಯಮಬಾಹಿರ ಎಂದ ಹೈಕೋರ್ಟ್

Raghavendra Adiga

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷರಾಗಿ ಡಾ. ಕೆ. ಸುಧಾಕರ್ ಅವರ ನಾಮನಿರ್ದೇಶನಕ್ಕಾಗಿ ಹೊರಡಿಸಲಾದ ಅಧಿಸೂಚನೆಯಲ್ಲಿ 'ಪೋಸ್ಟ್ ಫ್ಯಾಕ್ಟೊ' ಅನುಮೋದನೆಯ ಷರತ್ತು ಏಕೆ ಇಲ್ಲ ಎಂಬುದನ್ನು ವಿವರಿಸಬೇಕೆಂದು  ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಕೇಳಿದೆ.ಈ ನೇಮಕಾತಿಯ ವಿಧಾನದಲ್ಲಿ ನೀರಿನ ( (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ ನಿಯಮಾವಳಿಗಳು ಅನ್ವಯವಾಗಿದೆಯೆ ಎಂಬ ಬಗ್ಗೆ ಹೈಕೋರ್ಟ್ ನಲ್ಲಿ ಅರ್ಜಿ ದಾಖಲಾಗಿತ್ತು. ಇದರ ಸಾಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ನೇಮಕಾತಿ ನಡೆದು ಎರಡು ತಿಂಗಳ ನಂತರ ಸರ್ಕಾರಕ್ಕೆ ಉತ್ತರಿಸಲು ಕೇಳಿದೆ.

ಡಾ. ಕೆ. ಸುಧಾಕರ್ ಅವರು ಜೂನ್ 20 ರಂದು ಅಧಿಕಾರ ವಹಿಸಿಕೊಂಡಿದ್ದರು, ಆದರೆ ನ್ಯಾಯಾಲಯವು ಸರ್ಕಾರಕ್ಕೆ ನೋಟಿಸ್ ನೀಡಿ ನಾಮನಿರ್ದೇಶನದ ಮೂಲ ದಾಖಲೆಗಳನ್ನು ಕೇಳಿದ ನಂತರ 2019 ರ ಸೆಪ್ಟೆಂಬರ್ 3 ರಂದು ಸರ್ಕಾರಕ್ಕೆ ‘ಪೋಸ್ಟ್ ಫ್ಯಾಕ್ಟೊ’ ಅನುಮೋದನೆ ನೀಡಲಾಯಿತು.  ಇದೀಗ ನ್ಯಾಯಾಲಯವು  ಮಾನದಂಡಗಳನ್ನು ಪಾಲಿಸದೆ ನಾಮನಿರ್ದೇಶನ ಮಾಡಲಾಗಿದೆ ಮತ್ತು ಇದಕ್ಕಾಗಿ ಈಗ ಮತ್ತೆ ಹೊಸ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಹೇಳಿದೆ.

ಡಾ.ಸುಧಾಕರ್ ಅವರ ನಾಮಪತ್ರವನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರ ದ ಆರ್.ಅಂಜನೇಯ ರೆಡ್ಡಿ ಸಲ್ಲಿಸಿದ್ದ ಪಿಐಎಲ್ ಅನ್ನು ನ್ಯಾಯಾಲಯ ವಿಚಾರಣೆ ನಡೆಸಿತು.

SCROLL FOR NEXT