ತಂದೆಯನ್ನೇ ಹತ್ಯೆ ಮಾಡಿದ ಮಗ ರಘುವೀರ್ 
ರಾಜ್ಯ

ಬೆಳಗಾವಿ: ಮೊಬೈಲ್ ಹೆಚ್ಚು ಬಳಸಬೇಡ ಎಂದು ಹೇಳಿದಕ್ಕೆ ತಂದೆಯನ್ನೇ ಭೀಕರವಾಗಿ ಹತ್ಯೆಗೈದ ಪುತ್ರ

ನಿರಂತರವಾಗಿ ಮೊಬೈಲ್‌ ನಲ್ಲಿ ಪಬ್ ಜಿ ಗೇಮ್ ಆಡುತ್ತಿದ್ದ ಮಗನಿಗೆ ಬುದ್ದಿವಾದ ಹೇಳಿದ ತಂದೆಯನ್ನೇ ಪುತ್ರ ಭೀಕರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಬೆಳಗಾವಿಯ ಕಾಕತಿಯ ಸಿದ್ದೇಶ್ವರ ನಗರದಲ್ಲಿ ನಡೆದಿದೆ. 

ಬೆಳಗಾವಿ: ನಿರಂತರವಾಗಿ ಮೊಬೈಲ್‌ ನಲ್ಲಿ ಪಬ್ ಜಿ ಗೇಮ್ ಆಡುತ್ತಿದ್ದ ಮಗನಿಗೆ ಬುದ್ದಿವಾದ ಹೇಳಿದ ತಂದೆಯನ್ನೇ ಪುತ್ರ ಭೀಕರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಬೆಳಗಾವಿಯ ಕಾಕತಿಯ ಸಿದ್ದೇಶ್ವರ ನಗರದಲ್ಲಿ ನಡೆದಿದೆ.

ಕಾಕತಿಯ ನಿವಾಸಿ ಶಂಕರಪ್ಪ ದೇವಪ್ಪ ಕುಂಬಾರ (59) ಮಗನಿಂದ ಹತ್ಯೆಗೀಡಾದ ತಂದೆ. ಆರೋಪಿ ರಘುವೀರ ಶಂಕರ ಕುಂಬಾರ (21) ತಂದೆಯನ್ನು ಕೊಲೆಗೈದಿರುವ ಪುತ್ರ. ಪೊಲೀಸ್ ಇಲಾಖೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಂಕರಪ್ಪ ಮೂರು ತಿಂಗಳ ಹಿಂದೆ ನಿವೃತ್ತಿ ಹೊಂದಿದ್ದರು.

ಪುತ್ರ ರಘುವೀರ ಇತ್ತೀಚೆಗೆ ಮೊಬೈಲ್‌ನಲ್ಲಿ ಹೆಚ್ಚಾಗಿ ಆಟವಾಡಿ ಸುಮ್ಮನೆ ಕಾಲಹರಣ ಮಾಡುತ್ತಿದ್ದ ಎಂದು ಬೇಸರಗೊಂಡಿದ್ದ ತಂದೆ ರಾತ್ರಿ ಹೊತ್ತು ಹೆಚ್ಚು ಮೊಬೈಲ್ ಬಳಸದಂತೆ ಹಲವು ಬಾರಿ ಬುದ್ದಿವಾದ ಹೇಳಿದ್ದರು. ಆದರೆ ಪುತ್ರ ಯಾರ ಮಾತನ್ನೂ ತಲೆಗೆ ಹಾಕಿಕೊಂಡಿರಲಿಲ್ಲ. ಹೀಗೆ ಬುದ್ಧಿ ಹೇಳಿದ್ದಕ್ಕೆ ಮಗ ಒಮ್ಮೆ ಕುಪಿತಗೊಂಡು ಅಕ್ಕಪಕ್ಕದ ಮನೆಯವರ ಕಿಟಕಿ ಗಾಜುಗಳನ್ನು ಒಡೆದುಹಾಕಿದ್ದ. ಆತನನ್ನು ಠಾಣೆಗೆ ಕರೆದೊಯ್ದಿದ್ದ ಕಾಕತಿ ಪೊಲೀಸರು ತಂದೆಯ ಸಮ್ಮುಖದಲ್ಲಿ ಬುದ್ಧಿವಾದ ಹೇಳಿ ಕಳುಹಿಸಿದ್ದರು.

ಕಳೆದ ರಾತ್ರಿ ಕೂಡ ಮೊಬೈಲ್ ಆಡುತ್ತಿದ್ದಾಗ ತಂದೆ ಆತನ ಮೊಬೈಲ್‌ ಅನ್ನು ಕಿತ್ತುಕೊಂಡಿದ್ದರು. ಇದರಿಂದ ತೀವ್ರ ಕೋಪಗೊಂಡು ಮಗ ರಘುವೀರ್, ತಾಯಿಯನ್ನು ಕೋಣೆಯೊಂದರಲ್ಲಿ ಕೂಡಿಹಾಕಿ ಇಳಿಗೆಮಣೆಯಿಂದ ಶಂಕ್ರಪ್ಪನವರ ಕೈಕಾಲು ಹಾಗೂ ಕುತ್ತಿಗೆ ಭಾಗವನ್ನು ಕತ್ತರಿಸಿ ಭೀಕರವಾಗಿ ಕೊಲೆಗೈದಿದ್ದಾನೆ.

ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲ್ಯಾಣ ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣ: ರಾಜ್ಯ ಸರ್ಕಾರ ಪ್ರಸ್ತಾಪ

ಮನೆಗಳಿಗೆ ಎಲ್‌ಪಿಜಿ, ವಾಹನಗಳಿಗೆ ಸಿಎನ್‌ಜಿ ಪೂರೈಕೆ 100 ಪರ್ಸೆಂಟ್ ಗ್ಯಾರಂಟಿ: ಕೇಂದ್ರ ಭರವಸೆ

T20 World Cup ಗೆದ್ದ ಟೀಂ ಇಂಡಿಯಾಕ್ಕೆ 131 ಕೋಟಿ ರೂ. ಬಂಪರ್ ಬಹುಮಾನ! ದುಡ್ಡು ಹೇಗೆ ಹಂಚಿಕೆಯಾಗುತ್ತೆ ಗೊತ್ತಾ?

ಬಿಕ್ಕಟ್ಟಿನ ಬೆನ್ನಲ್ಲೇ IndiGo CEO ಪೀಟರ್ ಎಲ್ಬರ್ಸ್ ರಾಜೀನಾಮೆ

ಕೊನೆಗೂ ರಿಪೇರಿಯಾಗಲೇ ಇಲ್ಲ.. Op Sindoor ವೇಳೆ ಭಾರತ ಹೊಡೆದಿದ್ದ Murid Air Base Building ಅನ್ನೇ ನೆಲಸಮ ಮಾಡಿದ ಪಾಕಿಸ್ತಾನ!

SCROLL FOR NEXT