ರಾಜ್ಯ

ಪೊಲೀಸ್ ಠಾಣೆ ಸ್ವಚ್ಛವಾಗಿಲ್ಲದಿದ್ದರೆ ಅಮಾನತು: ಭಾಸ್ಕರ್ ರಾವ್ ಎಚ್ಚರಿಕೆ

Srinivasamurthy VN

ಬೆಂಗಳೂರು: ನಗರದ ಎಲ್ಲಾ ಪೊಲೀಸ್ ಠಾಣೆಗಳು ಸ್ವಚ್ಛವಾಗಿಲ್ಲದಿದ್ದರೇ, ಸಂಬಂಧಿಸಿದ ಪೊಲೀಸ್ ಅಧಿಕಾರಿಗಳನ್ನು ಹೊಣೆ ಮಾಡಿ, ಅಮಾನತುಗೊಳಿಸುವುದಾಗಿ ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ವೈಯಕ್ತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಆಯುಕ್ತರು ಬನಂಕರಿ ಠಾಣೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಠಾಣೆಯ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಪಿಎಸ್ಐ ಹಾಗೂ ಹೆಡ್ ಕಾನ್ಸ್ ಟೇಬಲ್ ಯಾರೂ ಕೂಡ ಕರ್ತವ್ಯದಲ್ಲಿ ಹಾಜರಿರಲಿಲ್ಲ. ಅಲ್ಲದೇ, ಶೌಚಾಲಯ ಹಾಗೂ ಠಾಣೆಯ ಎದುರಿಗಿನ ಅಸ್ವಚ್ಛತೆ ಕಂಡು ಸಿಬ್ಬಂದಿ ವಿರುದ್ಧ ಆಯುಕ್ತರು ಆಕ್ರೋಶಗೊಂಡಿದ್ದಾರೆ.

ಇನ್ನು 15 ದಿನಗಳಲ್ಲಿ ಠಾಣೆ ಸ್ವಚ್ಛವಾಗಿರಬೇಕು ಎಂದು ಬನಶಂಕರಿ ಪೊಲೀಸರಿಗೆ ಖಡಕ್ ಸೂಚನೆ ನೀಡಿದ ಅವರು, ವಾಕಿಟಾಕಿ ಮೂಲಕ ನಗರದ ಎಲ್ಲಾ ಠಾಣೆಗಳು ಸ್ವಚ್ಛವಾಗಿರಬೇಕು. ಯಾವುದೇ ಕ್ಷಣದಲ್ಲಾದರೂ ತಾವು ಠಾಣೆಗೆ ಭೇಟಿ ನೀಡಬಹುದು. ಠಾಣೆಗಳು ಸ್ವಚ್ಛವಾಗಿಲ್ಲದಿದ್ದರೇ ಅಧಿಕಾರಿಗಳನ್ನೇ ಹೊಣೆ ಮಾಡಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ಅಂತೆಯೇ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್‌ ಅವರು ದಿಢೀರ್‌ ನಗರದ ಬನಶಂಕರಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಈ ವೇಳೆ ಠಾಣೆಯ ಅವ್ಯವಸ್ಥೆಯನ್ನು ನೋಡಿ ಸಿಟ್ಟಾದರು. ಠಾಣೆ ಮೇಂಡೆನೆನ್ಸ್ ಗೆ ನೀಡಲಾಗುತ್ತಿರುವ ಹಣವನ್ನು ನೀವು ಮಿಸ್‌ ಯೂಸ್ ಮಾಡಿಕೊಳ್ಳುತ್ತಿದ್ದೀರಾ ಅಂತ ಕಿಡಿಕಾರಿದರು. ಇನ್ನು ತಾವು ಭೇಟಿ ನೀಡಿದ ವೇಳೆಯಲ್ಲಿ ಸ್ಥಳದಲ್ಲಿ ಪಿಎಸ್‌ಐ ಹೆಡ್ ಕಾನ್ಸ್ಟೇಬಲ್‌ ಇರದೇ ಇರುವುದನ್ನು ನೋಡಿ ಗರಂ ಆದರು. 

ಇನ್ನು ಇದೇ ವೇಳೆ ಸ್ಟೇಷನ್‌ನಲ್ಲಿದ್ದ ಗಲೀಜು ನೋಡಿ ಇನ್ಮುಂದೆ ಯಾವುದೇ ಕಾರಣಕ್ಕೂ ಇದಾವುದನ್ನು ಸಹಿಸಿಕೊಳ್ಳುವುದಿಲ್ಲ ಅಂತ ಗದರಿದ ಅವರು ಇನ್ನು ದಿವಸದಲ್ಲಿ ಸ್ಟೇಷನ್‌ಗಳು ಶುಚಿಯಾಗಿ ಇರಬೇಕು ಅಂತ ಎಚ್ಚರಿಕೆ ಕೊಟ್ಟರು. ಇದಲ್ಲದೇ ಎಲ್ಲಾ ಪೊಲೀಸ್ ಠಾಣೆಗಳಿಗೆ ಅವರು ವಾಕಿ ಟಾಕಿ ಮೂಲಕ ನಾನು ಯಾವುದೇ ಕ್ಷಣದಲ್ಲೂಕೂಡ ಭೇಟಿ ನೀಡಬಹುದು, ಒಂದು ವೇಳೆ ಶಿಸ್ತು ಮೀರಿದ್ದರೆ ಕಾನುನೂ ಕ್ರಮ ಕೈಗೊಳ್ಳಲಾಗುವುದು ಅಂತ ಹೇಳಿದರು.
=

SCROLL FOR NEXT