ರಾಜ್ಯ

ಸಂಸದ ಪ್ರಜ್ವಲ್ ರೇವಣ್ಣಗೆ ಪತ್ರಿಕಾ ಪ್ರಕಟಣೆ ಮೂಲಕ ಸಮನ್ಸ್ ಜಾರಿಗೊಳಿಸಿದ ಹೈಕೋರ್ಟ್!

Raghavendra Adiga

ಹಾಸನ: ಲೋಕಸಭೆ ಚುನಾವಣೆ ಸಮಯದಲ್ಲಿ ನಾಮಪತ್ರ ಸಲ್ಲಿಕೆ ಮಾಡುವಾಗ ತಮ್ಮ ಪ್ರಮಾಣಪತ್ರದಲ್ಲಿ ಆಸ್ತಿ ಗೆ ಸಂಬಂಧಿಸಿ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಆರೋಪವಿದ್ದು ಈ ಕುರಿತ ವಿಚಾರಣೆಗೆ ಸೆ. 30ರಂದು ಹಾಜರಾಗಬೇಕೆಂದು ಸಂಸದ ಪ್ರಜ್ವಲ್ ರೇವಣ್ಣಗೆ ಕರ್ನಾಟಕ ಹೈಕೋರ್ಟ್ ಪತ್ರಿಕಾ ಪ್ರಕಟಣೆ ಮೂಲಕ ಸಮನ್ಸ್ ನೀಡಿದೆ,

ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸುವ ಮೂಲಕ ಪ್ರಜ್ವಲ್ ರೇವಣ್ಣ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ದೂರುದಾರರಾಗಿರುವ ಮಾಜಿ ಸಚಿವ  ಎ.ಮಂಜು ಹಾಗೂ ವಕೀಲ ಜಿ.ದೇವರಾಜೇಗೌಡ ದಾಖಲಿಸಿದ ಪ್ರತ್ಯೇಕ ಪ್ರಕರಣದ ವಿಚಾರಣೆ ಇದೇ ತಿಂಗಳ 30ರಂದು ನಡೆಯಲಿದ್ದು ಆ ದಿನ ತಾವೇ ಖುದ್ದಾಗಿ ಅಥವಾ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸಂಸದರಿಗೆ ಸಮನ್ಸ್ ನಲ್ಲಿ ಕೇಳಲಾಗಿದೆ.

ಇದಕ್ಕೆ ಹಿಂದೊಮ್ಮೆ ತಾವು ವಿಚಾರಣೆಗಾಗಿ ನ್ಯಾಯಾಲಯದಿಂದ ಯಾವ ಸಮನ್ಸ್ ಗಳನ್ನು ಸ್ವೀಕರಿಸಿಲ್ಲ ಎಂದು ಪ್ರಜ್ವಲ್ ಹೇಳಿದ್ದರು. ಇದಕ್ಕೆ ಅಸಮಾಧಾನಗೊಂಡಿದ್ದ ನ್ಯಾಯಾಲಯ ಪತ್ರಿಕಾ ಪ್ರಕಟಣೆ ಮೂಲಕ ಸಮನ್ಸ್ ಜಾರಿಗೆ ಒಪ್ಪಿಗೆ ನೀಡಿತ್ತು. ಅದರಂತೆ ಸ್ಥಳೀಯ ಪತ್ರಿಕೆಯಲ್ಲಿ ಸಮ್ನ್ಸ್ ಕುರಿತಂತೆ ಪ್ರಕಟಣೆ ಹೊರಡಿಸಲಾಗಿದೆ. ಇದೀಗ ಬಹಿರಂಗ ಸಮನ್ಸ್ ಜಾರಿಯಾಗಿರುವ ಕಾರಣ ಮುಂದಿನ ವಿಚಾರಣೆಯಂದು ಸ್ವತಃಅ ಪ್ರಜ್ವಲ್ ರೇವಣ್ಣ ಇಲ್ಲವೇ ಅವರ ಪರ ವಕೀಲರು ಹಾಜರಾಗುವುದು ಕಡ್ಡಾಯವಾಗಲಿದೆ.

SCROLL FOR NEXT