ರಾಜ್ಯ

ಠಾಣೆಯಲ್ಲಿ ಆರೋಪಿಗೆ ಥಳಿತ ಆಘಾತಕಾರಿ, ತನಿಖೆಯಾಗಲಿ: ಜಿ. ಪರಮೇಶ್ವರ

Lingaraj Badiger

ಬೆಂಗಳೂರು: ಬೆಂಗಳೂರಿನಲ್ಲಿ ಆರೋಪಿಯೊಬ್ಬರನ್ನು ಪೊಲೀಸ್‌ ಅಧಿಕಾರಿ ಠಾಣೆಯಲ್ಲಿಯೇ ಅಮಾನವೀಯ ರೀತಿಯಲ್ಲಿ ಶಿಕ್ಷೆ ನೀಡುವ ಮೂಲಕ ಪೊಲೀಸ್‌ ಇಲಾಖೆ ಬಗ್ಗೆಯೇ ಜನರಲ್ಲಿ ಭೀತಿ ಉಂಟು ಮಾಡುವಂತೆ ನಡೆದುಕೊಂಡಿದ್ದಾರೆ. ಈ ಬಗ್ಗೆ ಗೃಹ ಸಚಿವರು ಗಮನ ಹರಿಸಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಆಗ್ರಹಿಸಿದ್ದಾರೆ.

ಪೊಲೀಸ್‌ ಇಲಾಖೆಯನ್ನು ಜನಸ್ನೇಹಿ ಮಾಡಬೇಕೆಂದು ಹಿಂದಿನ ನಮ್ಮ ಸರಕಾರ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಆದರೀಗ, ಬಿಜೆಪಿ ಸರಕಾರದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಪೊಲೀಸ್‌ ಠಾಣೆಯಲ್ಲೇ ಆರೋಪಿಯಬ್ಬರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡು ಪೊಲೀಸರ ಮೇಲೆ ಇನ್ನಷ್ಟು ಭಯ ಮೂಡುವಂತೆ ಮಾಡಿದ್ದಾರೆ. ಪೊಲೀಸರಿಗೆ ಆರೋಪಿಯನ್ನು ಬಂಧಿಸುವ ಅಧಿಕಾರವಿದೆ. ಸತ್ಯ ಹೇಳುವಂತೆ ಮಾಡಲು ಇತರೆ ಮಾರ್ಗ ಅನುಸರಿಸಬೇಕೇ ವಿನಃ, ಈ ರೀತಿಯಾದ ಶಿಕ್ಷೆ ಖಂಡನಾರ್ಹ ಎಂದು ಮಾಜಿ ಡಿಸಿಎಂ ಟ್ವೀಟ್ ಮಾಡಿದ್ದಾರೆ.

ಪೊಲೀಸ್‌ ಇಲಾಖೆಯಲ್ಲಿನ ಈ ಬೆಳವಣಿಗೆ ಅತ್ಯಂತ ಆಘಾತಕಾರಿಯಾಗಿದೆ. ಗೃಹ ಸಚಿವರು ಈ ಬಗ್ಗೆ ಕೂಡಲೇ ಗಮನ ಹರಿಸಿ ತನಿಖೆ ನಡೆಸಬೇಕು. ಅಧಿಕಾಯೊಬ್ಬರ ದರ್ಪದಿಂದ ಇಡೀ ಇಲಾಖೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತಾಗಲಿದೆ. ಅದಕ್ಕೂ ಮುನ್ನವೇ ಸಚಿವರು ಎಚ್ಚೆತ್ತು ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡಲಿ ಎಂದು ಅವರು ಟ್ವೀಟ್‌ ಮೂಲಕ ಒತ್ತಾಯಿಸಿದ್ದಾರೆ.

SCROLL FOR NEXT