ರಾಜ್ಯ

ಸಂಚಾರ ನಿಯಮ ಉಲ್ಲಂಘನೆ: ಒಂದೇ ದಿನದಲ್ಲಿ ರೂ.20 ಲಕ್ಷ ದಂಡ ವಸೂಲಿ 

Manjula VN

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದೊಡ್ಡ ಮೊತ್ತದ ಪರಿಷ್ಕೃತ ದಂಡ ಕುರಿತ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದ್ದು, ಒಂದೇ ದಿನದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 55 ಪ್ರಕರಣಗಳಲ್ಲಿ ರೂ. 20 ಲಕ್ಷ ದಂಡ ವಸೂಲು ಮಾಡಲಾಗಿದೆ. 

ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಗುರುವಾರ ಬೆಳಿಗ್ಗೆ 10 ಗಂಟೆಗಳ ವರೆಗೆ ದಾಖಲಾಗಿದ್ದ ಸಂಚಾರ ಉಲ್ಲಂಘನೆಯ ಒಟ್ಟು 55 ಪ್ರಕರಣಗಳಲ್ಲಿ ಸಂಚಾರಿ ಪೊಲೀಸರು ರೂ.20,55,200 ದಂಡ ವಸೂಲು ಮಾಡಿದ್ದಾರೆ. 

ಈ ಕುರಿತು ನಗರ ಸಂಚಾರಿ ಪೊಲೀಸರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಹೆಲ್ಮೆಟ್ ಧರಿಸಿದೆ ಇರುವ 1,274 ಪ್ರಕರಣಗಳು ದಾಖಲಾಗಿದ್ದು, ಅಂತಹ ಪ್ರಕರಣಗಳ ಸಂಬಂಧ ರೂ.2,82,400 ದಂಡ ವಸೂಲಿ ಮಾಡಲಾಗಿದೆ. ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತುಕೊಳ್ಳುವವರು ಹೆಲ್ಮೆಟ್ ಧರಿಸದಿರುವ 967 ಪ್ರಕರಣಗಳು ದಾಖಲಾಗಿತ್ತು. ಇದರಲ್ಲಿ ರೂ.2,45,200, ಪಾರ್ಕಿಂಗ್ ಅಲ್ಲದ ಸ್ಥಳದಲ್ಲಿ ಗಾಡಿಗಳನ್ನು ನಿಲ್ಲಿಸಿದ 919 ಪ್ರಕರಣಗಳಲ್ಲಿ ರೂ. 1,58,500 ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

SCROLL FOR NEXT