ರಾಜ್ಯ

ಪ್ರತಿ 2 ಬಿಬಿಎಂಪಿ ವಲಯಗಳಿಗೆ ವಿಶೇಷ ಆಯುಕ್ತರ ನೇಮಕ: ನಗರದ ಅಭಿವೃದ್ಧಿಗಾಗಿ ಒಗ್ಗಟ್ಟಾಗಿ ಕೆಲಸ: ಅಶ್ವತ್ಥ ನಾರಾಯಣ

Shilpa D

ಬೆಂಗಳೂರು:  ಸಿಲಿಕಾನ್ ಸಿಟಿ ಬೆಂಗಳೂರಿನ ಮೂಲಭೂತ ಸೌಕರ್ಯ ಹಾಗೂ ಟ್ರಾಫಿಕ್ ನಿಂದ ಕೇವಲ ನೀವು ಮಾತ್ರ ಬೇಸತ್ತಿಲ್ಲ, ಸರ್ಕಾರ ಕೂಡ, ಹೀಗಾಗಿ ಬೆಂಗಳೂರಿನ ಅವಶ್ಯಕ ಮೂಲಭೂತ ಸೌಕರ್ಯಗಳ ಸುಧಾರಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ಆಯೋಜಿಸಿದ್ದ ಬೆಂಗಳೂರು ಫಾರ್ವರ್ಡ್: ಎ  ಪ್ಯಾನಲ್ ಡಿಸ್ಕಶನ್ ಆನ್ ಇನ್ ಫ್ರಾಸ್ಟ್ರಕ್ಚರ್ ಆ್ಯಂಡ್ ಮೊಬಿಲಿಟಿ ಎಂಬ ವಿಷಯದ ಬಗ್ಗೆ ಆಯೋಜಿಸಿದ್ದ ಸಂವಾದಲ್ಲಿ ಪಾಲ್ಗೋಂಡು ಮಾತನಾಡಿದ ಅಶ್ವತ್ಥ ನಾರಾಯಣ.,ನಮ್ಮ ವಾರ್ ರೂಂ ಕಾರ್ಯ ನಿರ್ವಹಿಸಲು ಸ್ಪೀಡ್ ಆಗುತ್ತಿದೆ, ಬೆಂಗಳೂರಿಗೆ ದೊಡ್ಡ ದೊಡ್ಡ ಯೋಜನೆ ಘೋಷಿಸುವ ಮೊದಲು, ಏಕೀಕೃತ ಮಹಾನಗರ ಸಾರಿಗೆ ಪ್ರಾಧಿಕಾರ ರಚಿಸಲಾಗುವುದು ಎಂದು ಹೇಳಿದ್ದಾರೆ, ಇದು ಹಿರಿಯ ನಾಗರಿಕರ ಹಲವು ದಿನಗಳ ಬೇಡಿಕೆಯಾಗಿದೆ. 

ಅದಕ್ಕೂ ಮೊದಲು ತಕ್ಷಣವೇ  ಬದಲಾಗುವಂತೆ ಪ್ರತಿ ಎರಡು ಬಿಬಿಎಂಪಿ ವಲಯಗಳಿಗೆ ವಿಶೇಷ ಆಯುಕ್ತರನ್ನು ನೇಮಿಸಲಾಗುವುದು, ಇದರಿಂದಾಗಿ ಅಧಿಕಾರ ಕೇಂದ್ರೀಕೃತವಾಗುವುದನ್ನು ತಪ್ಪಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

ಬೊಮ್ಮನ ಹಳ್ಳಿ ಮತ್ತು ಮಹಾದೇವಪುರ ವಲಯಗಳು ವಿಶೇಷ ಆಯುಕ್ತರನ್ನು ಹೊಂದಲಿವೆ, ಅಧಿಕೃತ ಆದೇಶ ಮಾತ್ರ ಹೊರ ಬೀಳಬೇಕಿದೆ, 

ರಸ್ತೆಗಳ ಇತಿಹಾಸವನ್ನು ಸಾರ್ವಜನಿಕರಿಗೆ ತಿಳಿಸುವ  ತಮ್ಮ  ಮೆಚ್ಚಿನ ಯೋಜನೆ ಬ್ಗೆಗ ಇನ್ನೂ 15 ದಿನಗಳಲ್ಲಿ  ಆದೇಶ ಹೊರಡಿಸಲಾಗುವುದು, ಇದರಿಂದ ರಸ್ತೆಗಳ ವಿಸ್ತೀರ್ಣ, ರಸ್ತೆಗಳ ಆವಿಷ್ಕಾರ ಮುಂತಾದವುಗಳ ಬಗ್ಗೆ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ, ಇದರಿಂದಾಗಿ ಯಾರಾದರೂ ಅಕ್ರಮವಾಗಿ ರಸ್ತೆ ಅಗೆದರೇ ಕೂಡಲೆ ಎಲ್ಲರ ಗಮನಕ್ಕೂ ಬರಲಿದೆ.

ಇನ್ನೂ ಕಾರ್ಯ.ಕ್ರಮದಲ್ಲಿ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕಿ ಶಾಂತ್ವನಾ ಭಟ್ಟಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SCROLL FOR NEXT