ಸಂತೋಷ್ 
ರಾಜ್ಯ

6-5=2 ಚಿತ್ರದ ಮಾದರಿಯಲ್ಲೇ ಬೆಂಗಳೂರು ಮೂಲದ ಯುವಕ ಕುಮಾರ ಪರ್ವತದಲ್ಲಿ ನಾಪತ್ತೆ!

ಕುಮಾರ ಪರ್ವತಕ್ಕೆ ಚಾರಣ ಹೊರಟಿದ್ದ ತಂಡದ ಪೈಕಿ ಬೆಂಗಳೂರು ಮೂಲದ ಯುವಕನೋರ್ವ ನಾಪತ್ತೆಯಾಗಿದ್ದಾನೆ.

ಕುಕ್ಕೆ ಸುಬ್ರಹ್ಮಣ್ಯ: ಕುಮಾರ ಪರ್ವತಕ್ಕೆ ಚಾರಣ ಹೊರಟಿದ್ದ ತಂಡದ ಪೈಕಿ ಬೆಂಗಳೂರು ಮೂಲದ ಯುವಕನೋರ್ವ ನಾಪತ್ತೆಯಾಗಿದ್ದಾನೆ. 

ಬೆಂಗಳೂರಿನ ಗಾಯತ್ರಿನಗರ ನಿವಾಸಿ 25 ವರ್ಷ ವಯಸ್ಸಿನ ಸಂತೋಷ್ ಎಂಬಾತ ಬೆಟ್ಟದ ಹಾದಿಯಲ್ಲಿ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಬೆಂಗಳೂರು ಕಾಳಿಕಾನಗರ ನಿವಾಸಿ ದರ್ಶನ್ ಎಂಬುವರು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ.

12 ಯುವ ಚಾರಣಿಗರ ಬೆಂಗಳೂರು ತಂಡ ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಈ ತಂಡ ಚಾರಣಕ್ಕೆ ಹೋಗಿತ್ತು. ಶನಿವಾರ ಕುಕ್ಕೆ ಸುಬ್ರಹ್ಮಣ್ಯದ ಮೂಲಕ ಚಾರಣ ಆರಂಭಿಸಿದ್ದರು.

12 ಜನರ ಪೈಕಿ ಐವರು ಮುಂದೆ ಬಂದಿದ್ದು, ಸುಸ್ತಾಗಿದ್ದ ಆರು ಮಂದಿ ಹಿಂದಿನಿಂದ ಬರುತ್ತಿದ್ದರು. ಎರಡು ತಂಡಗಳ ನಡುವೆ ಅಂತರವಿತ್ತು ಎನ್ನಲಾಗಿದೆ. ಇನ್ನು ಏಕಾಂಗಿಯಾಗಿ ಬರುತ್ತಿದ್ದ ಸಂತೋಷ್ ಪರ್ವತ ಹಾದಿ ಮಧ್ಯೆ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್