ರಾಜ್ಯ

ಸಿಎಂ ಬಿಎಸ್ ವೈ ವಿರುದ್ಧ 'ಆಪರೇಷನ್ ಕಮಲ' ಆರೋಪ: ಅರ್ಜಿ ವಿಚಾರಣೆ ಮುಂದೂಡಿಕೆ

Raghavendra Adiga

ಕಲಬುರಗಿ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ "ಆಪರೇಷನ್ ಕಮಲ" ಪ್ರಯತ್ನ ಕುರಿತು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ನ್ಯಾಯಪೀಠ ಮುಂದೂಡಿದೆ. 

ಗುರುಮಿಟ್ಕಲ್ ಶಾಸಕ ನಾಗನಗೌಡರ್ ಪುತ್ರ ಶರಂಣಗೌಡ ಪಾಟೀಲ್ ಕಂದಕೂರ್ ಸಿಎಂ ಯಡಿಯೂರಪ್ಪ ವಿರುದ್ಧ ಅರ್ಜಿ ಸಲ್ಲಿಸಿದ್ದರು.ಶಾಸಕರ ಪರ  ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡಿಸಿದ್ದು ವಾದವಿದೀಗ ಪೂರ್ಣಗೊಂಡಿದೆ.  ಮಂಗಳವಾರ ಪ್ರಕರಣ ವಿಚಾರಣೆಗೆ ಬಂದಾಗ ನ್ಯಾಯಾಲಯದಲ್ಲಿ ಯಡಿಯೂರಪ್ಪ ವಕೀಲರು  ಸಲ್ಲಿಸಿದ ಅರ್ಜಿಗಳ ಕುರಿತು ಮುಂದಿನ ವಿಚಾರಣೆಗಯನ್ನು ನ್ಯಾಯಪೀಠ ತಡೆಹಿಡಿದಿದೆ.

ಏತನ್ಮಧ್ಯೆ ಶರಣಗೌಡ ಪರ ವಕೀಲರು ಸಿಎಂ ವಿರುದ್ಧ ವಿಚಾರಣೆಗೆ ನೀಡಿದ ತಡೆ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಇದಕ್ಕಾಗಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅಂದು ಪ್ರತಿಪಕ್ಷ ನಾಯಕನಾಗಿದ್ದ ಯಡಿಯೂರಪ್ಪ ಬಿಜೆಪಿಗೆ ಇತರೆ ಪಕ್ಷಗಳ ಶಾಸಕರನ್ನು ಸೆಳೆಯಲು ಹಲವು ಆಮಿಷಗಳನ್ನು ಒಡ್ಡಲು ಯತ್ನಿಸಿದ್ದರು ಎಂದು ಆರೋಪಿಸಲಾಗಿದ್ದು ಈ ಸಂಬಂಧ ಶರಣಗೌಡ ಕೆಲ ತಿಂಗಳ ಹಿಂದೆ ದೇವದುರ್ಗ ಠಾಣೆಯಲ್ಲಿ ಯಡಿಯೂರಪ್ಪ ವಿರುದ್ಧ ದೂರು ಸಲ್ಲಿಸಿದ್ದರೆನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು..

SCROLL FOR NEXT