ರಾಜ್ಯ

ಸ್ವಾಮೀಜಿ ಮಾತಿನಿಂದ ಬದಲಾದ ಗ್ರಾಮ: ಮೌಢ್ಯ ಹೊರಹಾಕಿ ಸಂಸದನನ್ನು ಆಹ್ವಾನಿಸಿದ ಗೊಲ್ಲರಹಟ್ಟಿ ಜನತೆ

Manjula VN

ತುಮಕೂರು: ಚಿತ್ರದುರ್ಗ ಸಂಸದ ಎ.ನಾರಾಯಣ ಸ್ವಾಮಿ ಅವರನ್ನು ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಅಲ್ಲಿನ ಯಾದವ ಸಮುದಾಯದವರು ಹಟ್ಟಿಗೆ ಬರದಂತೆ ತಡೆದ ಪ್ರಕರಣ ಸಾಕಷ್ಟು ಸುದ್ದಿ ಮಾಡಿತ್ತು. ಗ್ರಾಮದ ವಿರುದ್ದ ಹಲವರು ವಿರೋಧ ವ್ಯಕ್ತಪಡಿಸಿದ ಬಳಿಕ, ಸ್ವಾಮೀಜಿಗಳ ಮಾತುಗಳಿಂದ ಮನಪರಿವರ್ತಿನೆ ಮಾಡಿಕೊಂಡಿರುವ ಗ್ರಾಮಸ್ಥರು ಸಂಸದರನ್ನು ಗ್ರಾಮಕ್ಕೆ ಆಹ್ವಾನಿಸಿದ್ದಾರೆ. 

ಪ್ರಕರಣ ಬೆಳಕಿಗೆ ಬಂದ ಬಳಿಕ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿಗಳು ಸಮುದಾಯದ ಜನರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದರು. ಸ್ವಾಮೀಜಿಗಳ ಮಾತುಗಳನ್ನು ಕೇಳಿರುವ ಗ್ರಾಮಸ್ಥರು ಇದೀಗ ಸಂಸದ ನಾರಾಯಣಸ್ವಾಮಿಯವರನ್ನು ಗ್ರಾಮಕ್ಕೆ ಶುಕ್ರವಾರ ಆಹ್ವಾನಿಸಿದ್ದಾರೆ. 

ಪ್ರಕರಣ ಸಂಬಂಧ ಯಾದವ ಸಮುದಾಯದ ಮುಖ್ಯಸ್ಥ ಚಂದ್ರಶೇಖರ ಗೌಡ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. 

ಬದಲಾಗುತ್ತಿರುವ ಸಮಯದಲ್ಲಿ ನಾವು ಮುಂದುವರೆಯಬೇಕು. ಜಾತಿಗಳು ವೃತ್ತಿಯನ್ನು ಆಧರಿಸಿದ್ದು, ನಾವು 12ನೇ ಶತಮಾನದ ಕ್ರಾಂತಿಕಾರಿ ಬಸವೇಶ್ವರ ತತ್ವಗಳನ್ನು ಅನುಸರಿಸಬೇಕು ಎಂದು ಸ್ವಾಮೀಜಿ ತಿಳಿಸಿದ್ದಾರೆ. 

ಅಸ್ಪೃಶ್ಯತೆಯನ್ನು ಮುಂದುವರೆಸಿಕೊಂಡು ಹೋಗುವುದೂ ಕೂಡ ಒಂದು ರೀತಿ ಅಪರಾಧ. ಭವಿಷ್ಯದಲ್ಲಿ ಇಂತಹ ಅಪರಾಧಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಶೀಲ್ದಾರ್ ವರದರಾಜ್ ಅವರು ಹೇಳಿದ್ದಾರೆ. 

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರಮಾ ಅವರು, ತಪ್ಪು ಮಾಡಿರುವುದಾಗಿ ಜನರು ಹೇಳಿದ್ದಾರೆ. ಮತ್ತೆ ಇಂತಹ ತಪ್ಪನ್ನು ಮಾಡುವುದಿಲ್ಲ ಎಂದೂ ಹೇಳಿದ್ದಾರೆ. ಆದರೂ , ಪ್ರಕರಣ ಸಂಬಂಧ ಉಪ ಆಯುಕ್ತರಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಸಮುದಾಯದ ನಿವೃತ್ತ ಐಎಫ್ಎಸ್ ಅಧಿಕಾರಿ ಚಿಕ್ಕಪ್ಪಯ್ಯ ಮಾತನಾಡಿ, 10 ಜಿಲ್ಲೆಗಳಲ್ಲಿರುವ 37 ತಾಲೂಕುಗಳಲ್ಲಿ 1,224 ಜನರು ನಮ್ಮ ಸಮುದಾಯದವರಿದ್ದಾರೆ. ವ್ಯಾಪ್ತಿಯಲ್ಲಿ ಹಾಗೂ ಅಧ್ಯಯನದಲ್ಲಿ ನಾವು ಬುಡಕಟ್ಟು ಜನಾಂಗದವರಾಗಿದ್ದೇವೆ. ಸಮುದಾಯಕ್ಕೆ ಅಂದಿನ ಸಿದ್ದರಾಮಯ್ಯ ಸರ್ಕಾರ ಎಸ್'ಟಿ ಪಟ್ಟಿ ನೀಡಿತ್ತು ಎಂದಿದ್ದಾರೆ. 

SCROLL FOR NEXT