ಸಂಗ್ರಹ ಚಿತ್ರ 
ರಾಜ್ಯ

ಪಬ್'ಜಿ ಚಾಲೆಂಜ್'ನಲ್ಲಿ ಸೋಲು: ಚರಂಡಿಯಲ್ಲಿ ಈಜುತ್ತಾ ಹುಚ್ಚಾಟ ಮೆರೆದ ಬಾಲಕ, ವಿಡಿಯೋ ವೈರಲ್

ಪಬ್'ಜಿ ಗೇಮ್ ಯುವಕರಿಗೆ ಹುಚ್ಚು ಹಿಡಿಯುವಂತೆ ಮಾಡುತ್ತಿದೆ ಎಂಬುದಕ್ಕೆ ಇದೊಂದು ಘಟನೆ ಸಾಕ್ಷಿಯಾಗಿದೆ. ಪಬ್'ಜಿ ಚಾಲೆಂಜ್ ನಲ್ಲಿ ಸೋಲು ಕಂಡ ಬಾಲಕನೊಬ್ಬ ಚರಂಡಿಯಲ್ಲಿ ಈಜಿ ಹುಚ್ಚಾಟ ಮೆರೆದಿರುವ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ವಿಜಯಪುರ: ಪಬ್'ಜಿ ಗೇಮ್ ಯುವಕರಿಗೆ ಹುಚ್ಚು ಹಿಡಿಯುವಂತೆ ಮಾಡುತ್ತಿದೆ ಎಂಬುದಕ್ಕೆ ಇದೊಂದು ಘಟನೆ ಸಾಕ್ಷಿಯಾಗಿದೆ. ಪಬ್'ಜಿ ಚಾಲೆಂಜ್ ನಲ್ಲಿ ಸೋಲು ಕಂಡ ಬಾಲಕನೊಬ್ಬ ಚರಂಡಿಯಲ್ಲಿ ಈಜಿ ಹುಚ್ಚಾಟ ಮೆರೆದಿರುವ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಹುಚ್ಚಾಟ ಮೆರೆದ ಬಾಲಕನ ವಿಡಿಯೋವನ್ನು ಆತನ ಗೆಳೆಯ ಹಂಚಿಕೊಂಡಿದ್ದು, ಘಟನೆಯನ್ನು ವಿವರಿಸಿದ್ದಾನೆ. 

ಪಬ್'ಜಿ ಗೇಮ್ ಆಡುತ್ತಿದ್ದ ಬಾಲಕ ಗೆದ್ದೇ ಗೆಲ್ಲುತ್ತೇನೆ, ಗೆಲ್ಲದಿದ್ದರೆ ಚರಂಡಿಯಲ್ಲಿ ಈಜುತ್ತೇನೆಂದು ಗೆಳೆಯರೊಂದಿಗೆ ಚಾಲೆಂಜ್ ಮಾಡಿದ್ದಾನೆ. ಪ್ರತೀನಿತ್ಯ ಪಬ್ ಜಿ ಗೇಮ್ ಆಡುತ್ತಿದ್ದ ಬಾಲಕನಿಗೆ ತನ್ನ ಗೆಲವು ಖಚಿತ ಎಂದು ತಿಳಿದಿದ್ದ. ಈ ಆತ್ಮವಿಶ್ವಾಸದಿಂದಲೇ ಗೆಳೆಯರೊಂದಿಗೆ ಚಾಲೆಂಜ್ ಮಾಡಿದ್ದ. ಇದರಂತೆ ಆಟವಾಡುವ ವೇಳೆ ಚಾಲೆಂಜ್ ನಲ್ಲಿ ಸೋತಿದ್ದಾನೆ. 

ಸೋತ ಬಳಿಕ ಆರಂಭದಲ್ಲಿ ಚರಂಡಿಯಲ್ಲಿ ಈಜಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಬಳಿಕ ಇದ್ದಕ್ಕಿದ್ದಂತೆ ಚರಂಡಿಯಲ್ಲಿ ಬಿದ್ದು ಈಜಲು ಆರಂಭಿಸಿದ್ದಾನೆ. 2-3 ನಿಮಿಷಗಳ ಕಾಲ ಬಾಲಕ ಚರಂಡಿಯಲ್ಲಿ ಈಜಾಡಿದ್ದಾನೆ. ಈಜುವಂತೆ ಯಾರೂ ಆತನಿಗೆ ಬಲವಂತ ಮಾಡಿರಲಿಲ್ಲ. ಆತನನ್ನು ತಡೆಯಲು ನಾವೇ ಯತ್ನಿಸಿದ್ದೆವು. ಆದರೂ ಆತ ಚರಂಡಿಯಲ್ಲಿ ಈಜುವುದನ್ನು ಬಿಡಲಿಲ್ಲ. ಗಂಟೆಗಳ ಬಳಿಕ ಸ್ನಾನ ಮಾಡಿ, ಮನೆಗೆ ತೆರಳಿದ್ದ ಎಂದು ಹೇಳಿದ್ದಾರೆ. 

ಇದಾದ ಬಳಿಕ ಅದೇ ದಿನ ರಾತ್ರಿ ಮತ್ತೆ ಪಬ್'ಜಿ ಆಡಲು ಆರಂಭಿಸಿದ್ದ. ಘಟನೆಯಿಂದ ಆತನ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ ಎಂದು ಬಾಲಕನ ಮತ್ತೊಬ್ಬ ಗೆಳೆಯ ತಿಳಿಸಿದ್ದಾರೆ. 

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಗೋಲ ಗುಮ್ಮಟದ ಪೊಲೀಸರು, ವೈರಲ್ ಆಗಿರುವ ವಿಡಿಯೋ ನಮ್ಮ ಅರಿವಿಗೆ ಬಂದಿದೆ. ಈ ಸಂಬಂಧ ಯಾವುದೇ ದೂರುಗಳೂ ದಾಖಲಾಗಿಲ್ಲ. ಬಾಲಕನ ಗುರ್ತಿಕೆಗಾಗಿ ಯತ್ನ ನಡೆಸುತ್ತಿದ್ದೇವೆ. ಯಾವ ಕಾರಣಕ್ಕೆ ಬಾಲಕ ಈ ರೀತಿಯ ವರ್ತನೆ ತೋರಿದ್ದಾನೆಂಬುದನ್ನು ತನಿಖೆ ಮಾಡಲಾಗುತ್ತದೆ. ವಿಡಿಯೋದಲ್ಲಿ ಬಾಲಕನ ಮುಖ ಸ್ಪಷ್ಟವಾಗಿಲ್ಲ. ಗೇಮ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel