ರಾಜ್ಯ

ನಮ್ಮ ಮೆಟ್ರೋಗೆ ಎಎಫ್‌ಸಿ ತಂತ್ರಜ್ಞಾನ ಅಳವಡಿಕೆಗೆ ಎಜಿಎಸ್ ನಿರ್ಧಾರ

Manjula VN

ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೊಗಾಗಿ ಎಂಡ್-ಟು-ಎಂಡ್ ಸ್ವಯಂಚಾಲಿತ ಶುಲ್ಕ ಸಂಗ್ರಹ (ಎಎಫ್‌ಸಿ)ವನ್ನು ನಿರ್ವಹಿಸುವುದಾಗಿ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಲಿಮಿಟೆಡ್ (ಎಜಿಎಸ್‌ಟಿಎಲ್) ಶುಕ್ರವಾರ ಪ್ರಕಟಿಸಿದೆ.

ಎರಡನೇ ಹಂತದ 61 ಹೊಸ ಮೆಟ್ರೋ ನಿಲ್ದಾಣಗಳಲ್ಲಿ ಎಎಫ್‌ಸಿ ವ್ಯವಸ್ಥೆಯನ್ನು ಮೂರು ವರ್ಷಗಳ ಅವಧಿಗೆ ಜಾರಿಗೆ ತರಲಾಗುವುದು. ಈ ಮೆಟ್ರೋ ನಿಲ್ದಾಣಗಳಲ್ಲಿ ಪೂರೈಕೆ, ಅಳವಡಿಕೆ ಮತ್ತು ನಿರ್ವಹಣೆಯನ್ನು ಕಂಪನಿ ನೋಡಿಕೊಳ್ಳುತ್ತದೆ.

ಸಿಂಗಾಪುರದ ಭೂ ಸಾರಿಗೆ ಪ್ರಾಧಿಕಾರದ (ಎಲ್‌ಟಿಎ) ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಎಂಎಸ್‌ಐ ಗ್ಲೋಬಲ್ ಜೊತೆಗೆ ಎಜಿಎಸ್‌ಟಿಟಿಎಲ್‌ನ ಒಕ್ಕೂಟವು ತಂತ್ರಜ್ಞಾನ ಪಾಲುದಾರನಾಗಿ ಒಪ್ಪಂದವನ್ನು ಪಡೆದುಕೊಂಡಿದೆ. ಪ್ರಸ್ತುತ, ಬೆಂಗಳೂರು ಮೆಟ್ರೋದ ಸುಮಾರು 40 ನಿಲ್ದಾಣಗಳಿವೆ. ದಿನಕ್ಕೆ 4 ಲಕ್ಷ ವಹಿವಾಟು ನಡೆಸುತ್ತಿದ್ದು, ಪ್ರಸ್ತುತ ಹಂತದಲ್ಲಿ, ಟೋಕನ್ ಮತ್ತು ಪೇಪರ್ ಟಿಕೆಟ್ ನೀಡಲಾಗುತ್ತಿದೆ.

SCROLL FOR NEXT