ರಾಜ್ಯ

ವಿಜಯನಗರ ಜಿಲ್ಲೆ ರಚನೆಗೆ ಗಣಿ ರೆಡ್ಡಿಗಳ ವಿರೋಧ: ಆಂತರಿಕ ಸಂಘರ್ಷ ಆರಂಭ

Shilpa D

ಬಳ್ಳಾರಿ: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ಮಾಡುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಬಳ್ಳಾರಿ ಗಣಿ ರೆಡ್ಡಿ ಪಡೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಬಳ್ಳಾರಿಯಲ್ಲಿ ತಮ್ಮ ಪ್ರಭಾವ ಕುಗ್ಗಿಸಲು ಆನಂದ್ ಸಿಂಗ್ ಸೇರಿದಂತೆ ಹಲವು ಪ್ರಮುಖರು ಹಣೆದಿರುವ ತಂತ್ರಗಾರಿಕೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಹ ಕೈಜೋಡಿಸಿರುವ ಬಗ್ಗೆ ರೆಡ್ಡಿ ಬಣ ಸಹಜವಾಗಿಯೇ ಆಕ್ರೋಶಗೊಂಡಿದೆ.

ಬಳ್ಳಾರಿ ರೆಡ್ಡಿ ಬಣ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನಡುವೆ ಆಂತರಿಕ ಸಂಘರ್ಷಕ್ಕೆ ಈ ಬೆಳವಣಿಗೆ ನಾಂದಿಯಾಗಿದೆ. ಹೊಸ ಜಿಲ್ಲೆ ರಚನೆ ಮಾಡಬಾರದು. ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಸಲ್ಲದು. ಇಂತಹ ಪ್ರಯತ್ನ ಕೈಬಿಡುವಂತೆ ಆರೋಗ್ಯ ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ್ ರೆಡ್ಡಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಆದರೆ ಮತ್ತೋರ್ವ ಶಾಸಕ ಕರುಣಾಕರ ರೆಡ್ಡಿ ತಟಸ್ಥ ಧೋರಣೆ ತಳೆದಿದ್ದಾರೆ. 

SCROLL FOR NEXT