ರಾಜ್ಯ

ಐಎಂಎ ಹಗರಣ: ಸೆ.30ರವರೆಗೆ ಸಿಬಿಐ ಕಸ್ಟಡಿಗೆ ಮನ್ಸೂರ್ ಖಾನ್

Raghavendra Adiga

ಬೆಂಗಳೂರು: ಸಾವಿರಾರು ಕೋಟಿ ರು. ವಂಚನೆಯ ಐಎಂಎ ಹಗರಣದಲ್ಲಿ ಪ್ರಮುಖ ಆರೋಪಿ ಮನ್ಸೂರ್ ಖಾನ್ ನನ್ನು ಸೆಪ್ಟೆಂಬರ್ 30ರವರೆಗೆ ಸಿಬಿಐ ವಶಕ್ಕೊಪ್ಪಿಸಿ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

ಮನ್ಸೂರ್ ಖಾನ್ ಜತೆಗೆ ಇನ್ನೋರ್ವ ಆರೋಪಿ ನವೀದ್​ ಎಂಬಾತನನ್ನು ನ್ಯಾಯಾಲಯ ಸಿಬಿಐ ಕಸ್ಟಡಿಗೆ ನೀಡಿದ್ದು ಇನ್ನುಳಿದ ಆರೋಪಿಗಳಾದ ನಿಜಾಮುದ್ದೀನ್​ ಮತ್ತು ನಾಸೀರ್​ ಹುಸೇನ್​ ಅವರುಗಳಿಗೆ ಅ. 5ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸಿಬಿಐ ವಶದಲ್ಲಿದ್ದ ಮನ್ಸೂರ್ ಖಾನ್ ಕಸ್ಟಡಿ ಅವಧಿ ಶುಕ್ರವಾರ ಅಂತ್ಯವಾದ ಹಿನ್ನೆಲೆ ಸಿಬೈ ಅಧಿಕಾರಿಗಳು ಅವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸಿಬಿಐ ಪರ ವಕೀಲ ಸುದರ್ಶನ್ ಆರೋಪಿಗಳ ವಿಚಾರಣೆ ಇನ್ನಷ್ಟು ಬಾಕಿ ಇದ್ದು ಅದಕ್ಕಾಗಿ ಇನ್ನಷ್ಟು ದಿನ ವಶಕ್ಕೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ಸಿಬಿಐ ಪರ ವಕೀಲರ ಮನವಿ ಪುರಸ್ಕರಿಸಿರುವ ನ್ಯಾಯಾಲಯ ಮನ್ಸೂರ್ ಖಾನ್ ಸೇರಿ ಇಬ್ಬರು ಆರೋಪಿಗಳನ್ನು ಸೆ.30ರವರೆಗೆ ಸಿಬಿಐ ವಶಕ್ಕೊಪ್ಪಿಸಿದೆ.

SCROLL FOR NEXT