ರಾಜ್ಯ

ಮಲಯಾಳಿಗಳಿಗೆ ಒಲವು ತೋರಿಸುತ್ತಾರೆ ಎಂದು ವಾಟ್ಸಾಪ್ ನಲ್ಲಿ ಸುದ್ದಿ; ಕೊಡಗು ಜಿಲ್ಲಾಧಿಕಾರಿ ಪೊಲೀಸರಿಗೆ ದೂರು 

Sumana Upadhyaya

ಮಡಿಕೇರಿ: ಮಲಯಾಳೀಯರಿಗೆ ತಾವು ಒಲವು ತೋರಿಸುತ್ತಿದ್ದೇನೆ ಎಂದು ಕೆಲವರು ನಕಲಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕೊಡಗು ಜಿಲ್ಲಾಧಿಕಾರಿ ಅನ್ನಿ ಕೆ ಜಾಯ್ ಮಡಿಕೇರಿ ಪೊಲೀಸರಿಗೆ ದೂರು ನೀಡಿದ್ದಾರೆ.


ಕೇರಳ ಮೂಲದವರಾದ ಅನ್ನಿ ಕೆ ಜಾಯ್ ಕೊಡಗಿನಲ್ಲಿ ಜಮ್ಮಾ ಭೂಮಿಯನ್ನು ಮಲಯಾಳಿಗಳಿಗೆ ಅಕ್ರಮವಾಗಿ ಕೊಡಿಸಿದ್ದಾರೆ ಎಂದು ವಾಟ್ಸಾಪ್ ನಲ್ಲಿ ಸುದ್ದಿಗಳು ಹರಿದಾಡುತ್ತಿದೆ. ಒಂದು ಪೋಸ್ಟ್ ನಲ್ಲಿ, ಡಿಸಿ ಅನ್ನಿ, ಕೇರಳದಿಂದ ವಲಸೆ ಬಂದವರು ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಭಾವಕ್ಕೊಳಗಾಗಿ ಜಮ್ಮಾ ಕೊಡವರು ಮತ್ತು ಕೊಡಗು ಗೌಡರ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಜಮ್ಮಾ ಕೊಡವರಿಗೆ ಮತ್ತು ಕೊಡಗು ಗೌಡರ ಭೂಮಿಯನ್ನು ತಪ್ಪಾಗಿ ಉದ್ದೇಶಪೂರ್ವಕವಾಗಿ ಗುರುತಿಸಿ ಮಲಯಾಳಿಗಳಿಗೆ ಕೊಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಜಮ್ಮಾ ಭೂಮಿಯಲ್ಲಿ ನದಿ ಪಾತ್ರದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಳ್ಳಲಾಗಿದೆ ಎಂದು ಇತ್ತೀಚೆಗೆ ಅವರನ್ನು ಒತ್ತಾಯಪೂರ್ವಕವಾಗಿ ಎಬ್ಬಿಸಲಾಗಿತ್ತು. 


ಜಮ್ಮಾ ಭೂಮಿಯನ್ನು ಅತಿಕ್ರಮಣ ಮಾಡಿರುವವರು ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದು ಅವರು ಜಿಲ್ಲಾಧಿಕಾರಿಯ ಕ್ರಮದಿಂದ ರೊಚ್ಚಿಗೆದ್ದಿದ್ದಾರೆ. ಇತ್ತೀಚೆಗೆ ಭೂಕುಸಿತ, ಪ್ರವಾಹಕ್ಕೆ ಮನೆ ಕಳೆದುಕೊಂಡವರಿಗೆ ವಸತಿ ಕಲ್ಪಿಸಲು ಅಕ್ರಮವಾಗಿ ಕುಳಿತಿರುವವರನ್ನು ಅಲ್ಲಿಂದ ಎಬ್ಬಿಸುವ ಕಾರ್ಯಾಚರಣೆ ಜಿಲ್ಲೆಯಲ್ಲಿ ನಡೆಯುತ್ತಿದೆ.


ವಾಟ್ಸಾಪ್ ನಲ್ಲಿ ಇಂತಹ ಸಂದೇಶಗಳನ್ನು ಹಬ್ಬಿಸಿದವರು, ಆಡ್ಮಿನ್ ಗಳು, ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಹಬ್ಬಿಸಿದ ಇಂತಹ 50 ಜನರನ್ನು ಪೊಲೀಸರು ತನಿಖೆಗೊಳಪಡಿಸಿದ್ದರು. ತನಿಖೆ ಮುಂದುವರಿದಿದೆ ಎಂದು ಮಡಿಕೇರಿ ಸರ್ಕಲ್ ಇನ್ಸ್ ಪೆಕ್ಟರ್ ಅನೂಪ್ ಮಾದಪ್ಪ ತಿಳಿಸಿದ್ದಾರೆ. 


ನೆಲ್ಲಿಹುಡಿಕೆರಿಯಲ್ಲಿ ಇತ್ತೀಚೆಗೆ 10 ಎಕರೆ ಒತ್ತುವರಿ ಜಮೀನಿನಲ್ಲಿದ್ದ ಜನರನ್ನು ಜಿಲ್ಲಾಡಳಿತ ಹೊರಹಾಕಲು ನೋಡಿದಾಗ ಅಲ್ಲಿದ್ದವರು ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು.


ಜಮ್ಮಾ ಭೂಮಿ ಎಂದರೇನು?: ಬ್ರಿಟಿಷರು ಮತ್ತು ರಾಜರು ನಮ್ಮ ರಾಜ್ಯವನ್ನಾಳುತ್ತಿದ್ದ ಸಮಯದಲ್ಲಿ ಸ್ಥಳೀಯ ಕೊಡವರು ಸಲ್ಲಿಸಿದ ಸೇವೆಗಾಗಿ ಕೃತಜ್ಞತೆಯಾಗಿ ನೀಡಿದ ಜಮೀನನ್ನು ಜಮ್ಮಾ ಭೂಮಿ ಎಂದು ಕರೆಯಲಾಗುತ್ತದೆ. ಜಮ್ಮಾ ಭೂಮಾಲೀಕರು ಯಾವುದೇ ಪರವಾನಗಿ ಪಡೆಯದೆ ಶಸ್ತ್ರಾಸ್ತ್ರ ಕಾಯ್ದೆಯಿಂದ ವಿನಾಯ್ತಿ ಪಡೆದು ಗನ್ ಗಳನ್ನು ಹೊಂದುವ ವಿಶೇಷ ಸೌಲಭ್ಯ ಪಡೆದಿರುತ್ತಾರೆ.

SCROLL FOR NEXT