ರಾಜ್ಯ

ಚಿಕ್ಕಬಳ್ಳಾಪುರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.15 ಲಕ್ಷ ರೂ.ವಶ

Shilpa D

ಚಿಕ್ಕಬಳ್ಳಾಪುರ:  ಉಪ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.15 ಲಕ್ಷ ರೂಪಾಯಿ ನಗದನ್ನು ಚುನಾವಣಾ ಅಧಿಕಾರಿಗಳು ವಶ ಪಡಿಸಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ನಗರದ ಹೊರ ವಲಯದ ಕಣಿವೆ ನಾರಾಯಣಪುರ ಸಮೀಪದ ಸುಲ್ತಾನ್‌ಪೇಟೆಯಲ್ಲಿ ನಿರ್ಮಿಸಲಾಗಿರುವ ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ವೇಳೆ ಈ ನಗದು ವಶಪಡಿಸಲಾಗಿದೆ. ದಾಖಲೆ ಇಲ್ಲದೇ ಬೆಂಗಳೂರಿನ ಯಲಹಂಕ ನಿವಾಸಿ ನದೀಮ್ ಎಂಬುವರು ಕಾರಿನಲ್ಲಿ ಇಟ್ಟಿದ್ದ 2.15 ಲಕ್ಷ ರೂಗಳನ್ನು ಚುನಾವಣಾ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ. ಈ ಬಗ್ಗೆ ನಂದಿ ಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆ ಪಿಎಸ್ಐ ಪಾಟೀಲ್ ತಿಳಿಸಿದ್ದಾರೆ.

ಜಿಲ್ಲೆಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಚುನಾವಣಾ ಅಕ್ರಮಗಳನ್ನು ತಡೆಯಲು ಜಿಲ್ಲಾಡಳಿತ 10 ಚೆಕ್ ಪೋಸ್ಟ್ ಗಳನ್ನು ತೆರೆದಿದೆ.
 

SCROLL FOR NEXT