ರಾಜ್ಯ

ಬೆಂಗಳೂರು: ನಕಲಿ ಟೀ ಪುಡಿ ಜಾಲ ಪತ್ತೆ, ಇಬ್ಬರ ಬಂಧನ

Raghavendra Adiga

ಬೆಂಗಳೂರು: ಪ್ರತಿಷ್ಠಿತ ಬ್ರ್ಯಾಂಡ್ ಗಳ ಹೆಸರಲ್ಲಿ ನಕಲಿ ಟೀ ಪುಡಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಪೋಲೀಸರು ರಾಜಸ್ಥಾನ ಮೂಲದ ಇಬ್ಬರನ್ನು ಬಂಧಿಸಿದ್ದಾರೆ.

ರಾಜಸ್ಥಾನದ ರಾಣಾ ಸಿಂಗ್‍ಪೇಟ್‍ನ ಭವರ್ ಲಾಲ್ (26) ಹಾಗೂ ಜಗರಾಂ (40) ಬಂಧಿತರೆಂದು ಗುರುತಿಸಲಾಗಿದ್ದು ಈ ಇಬ್ಬರೂ ಕಳೆದ ಎರಡು ವರ್ಷಗಳಿಂದ ಯಾರಿಗೂ ಗೊತ್ತಾಗದಂತೆ ಹೆಸರಾಂತ ಹಿಂದೂಸ್ತಾನ್ ಲಿವರ್ ಲಿಮಿಟೆಡ್ ಕಂಪನಿಯ ರೆಡ್ ಲೇಬಲ್ ಬ್ರೂಕ್ ಬಾಂಡ್ ತ್ರೀ ರೋಸಸ್ ಬ್ರಾಂಡ್‍ನ ನಕಲಿ ಟೀ ಪುಡಿ ತಯಾರಿಸಿ ಮಾರಾಟ ಮಾಡುತ್ತಿದ್ದರು.

ಬಂಧಿತರಿಂದ ಬ್ರೂಕ್ ಬಾಂಡ್ ರೆಡ್ ಲೇಬಲ್ ತ್ರೀ ರೋಸಸ್‍ನ 15 ಲಕ್ಷ ಮೌಲ್ಯದ 2,497 ಕೆಜಿ ನಕಲಿ ಟೀ ಪುಡಿ , ನಕಲಿ ಟೀ ಪುಡಿ ಪ್ಯಾಕಿಂಗ್ ಮಾಡುತ್ತಿದ್ದ ಯಂತ್ರ, ಲೇಬಲ್‍ಗಳು ಸೇರಿದಂತೆ, 30 ಲಕ್ಷ ರೂ. ಮೌಲ್ಯದ ಸರಕನ್ನು ವಶಕ್ಕೆ ಪಡೆಯಲಾಗಿದೆ. 

ಆರೋಪಿಗಳು ಬಂಡೇಪಾಳ್ಯದಲ್ಲಿ ಮನೆ ಮಾಲೀಕರನ್ನು ಪ್ಯಾಕಿಂಗ್ ಉದ್ಯಮ ಎಂದು ನಂಬಿಸಿ ಬಾಡಿಗೆಗೆ ಮನೆ ಪಡೆದಿದ್ದರು. ಕಳೆದೆರಡು ವರ್ಷಗಳಿಂದ  ನಕಲಿ ಟೀ ಪುಡಿಯಮಾರಾಟ ಮಾಡುತ್ತಿದ್ದರು. ಯಾರಿಗೂ ಗೊತ್ತಾಗದಂತೆ, ನಕಲಿ ಟೀ ಪುಡಿ ಜಾಲವನ್ನು ಆರೋಪಿಗಳು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದ್ದರು. ಆದರೆ ಖಚಿತ ಂಆಹಿತಿ ಮೇರೆಗೆ ಬಂಡೇಪಾಳ್ಯ ಪೋಲೀಸರು ಇನ್ಸ್‍ಪೆಕ್ಟರ್ ಯೋಗೇಶ್ ನೇತೃತ್ವದಲ್ಲಿ ದಾಳಿ ನಡೆಸಿದಾಗ ಸತ್ಯ ಬಹಿರಂಗವಾಗಿದೆ.
 

SCROLL FOR NEXT