ರಾಜ್ಯ

ವಿಧ್ವಂಸಕ ಕೃತ್ಯಕ್ಕೆ ನೆರವು: ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಶಂಕಿತ ಉಗ್ರ ಸಿಸಿಬಿ ವಶಕ್ಕೆ

Manjula VN

ಬೆಂಗಳೂರು: ಉಗ್ರರ ವಿಧ್ವಂಸಕ ಕೃತ್ಯಗಳಿಗೆ ಸ್ಫೋಟಕ ವಸ್ತುಗಳನ್ನು ಪೂರೈಕೆ ಮಾಡಿದ ಪ್ರಕರಣ ಸಂಬಂಧ ವಿಚಾರಣೆ ಸಲುವಾಗಿ ಮುಂಬೈ ಜೈಲಿನಲ್ಲಿದ್ದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಶಂಕಿತ ಉಗ್ರ ಝೈನಾಲುವುದ್ದೀನ್ ಅಲಿಯಾಸ್ ಜಾಹೀದ್ ಶೇಕ್'ನನ್ನು ಕೇಂದ್ರೀಯ ತನಿಖಾ ತಂಡ (ಸಿಸಿಬಿ) ವಶಕ್ಕೆ ಪಡೆದುಕೊಂಡಿದ್ದು, ಗುರುವಾಗರ ನಗರಕ್ಕೆ ಕರೆ ತಂದಿದೆ. 

2015ರಲ್ಲಿ ಪುಲಿಕೇಶಿ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿ ಆಯುರ್ವೇದಿಕ್ ವೈದ್ಯ ಸೈಯದ್ ಇಸ್ಮಾಯಿಲ್ ಅಫಕ್ ಸೇರಿದಂತೆ ಭಟ್ಕಳ ಮೂಲದ ಮೂವರು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಶಂಕಿತ ಉಗ್ರರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಅಲ್ಲದೆ, ಅಂದೇ ಭಟ್ಕಳದಲ್ಲಿನ ಅಫಕ್ ಮನೆ ಮೇಲೆ ಸಹ ದಾಳಿ ನಡೆಸಿ ಅಪಾರ ಪ್ರಮಾಣದ ಸ್ಫೋಟಕ ತಯಾರಿಕಾ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. 

ಈ ಪ್ರಕರಣದ ತನಿಖೆ ವೇಳೆ ಅಫಕ್ ತಂಡದ ಜೊತೆ ಝೀನಾಲುವುದ್ದೀನ್ ನಂಟು ಹೊಂದಿದ್ದ ವಿಚಾರಗಳು ತಿಳಿದುಬಂದಿತ್ತು. ಆದರೆ, ಅಂದು ದುಬೈನಲ್ಲಿ ನೆಲೆಸಿದ್ದ ಆತ, 2016ರಲ್ಲಿ ಮುಂಬೈಗೆ ಮರಳಿದ್ದಾಗ ಮಹಾರಾಷ್ಟ್ರದ ಎಟಿಎಸ್ ಬಂಧಿಸಿತ್ತು. ಇತ್ತ ಸ್ಫೋಟಕ ವಸ್ತು ಪೂರೈಕೆ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ, ನ್ಯಾಯಾಲಯಕ್ಕೆ ಛೈನಾಲುವುದ್ದೀನ್ ನಾಪತ್ತೆ ಆರೋಪಿ ಎಂದು ಉಲ್ಲೇಖಿಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಈಗ ಮುಂಬೈ ಕಾರಾಗೃಹದಲ್ಲಿದ್ದ ಶಂಕಿತ ಉಗ್ರನನ್ನು ಸಿಸಿಬಿ ವಶಕ್ಕೆ ಪಡೆದುಕೊಂಡು ನಗರಕ್ಕೆ ಕರೆ ತಂದಿದೆ. 

ಹೊಸವರ್ಷಾಚರಣೆಗೂ ಮುನ್ನ 2014ರ ಡಿಸೆಂಬರ್ ನಲ್ಲಿ ಎಂ.ಜಿರಸ್ತೆಯ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಬೆಂಗಳೂರು ಹಾಗೂ ಆಂತರಿಕ ಭದ್ರತಾ ವಿಭಾಗದ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಪುಲಿಕೇಶಿ ನಗರ ಸಮೀಪದ ಕಾಕ್ಸ್ ಟೌನ್ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಆಗ ವೈದ್ಯ ಸೈಯದ್ ಇಸ್ಮಾಯಿಲ್ ಅಫಕ್, ಸದ್ದಾಂ ಹುಸೇನ್ ಹಾಗೂ ಅಬ್ದುಸ್ ಸುಬೂರ್ ನನ್ನು ಬಂಧಿಸಿದ್ದರು. ಅದೇ ದಿನ ಭಟ್ಕಳದಲ್ಲಿ ಅಫಕ್ ಮನೆ ಮೇಲೆಯಬ ಮತ್ತೊಂದು ತಂಡ ದಾಳಿ ನಡೆಸಿತ್ತು. ಈ ವೇಳೆ ಸ್ಫೋಟಕ ವಸ್ತುಗಳು, ಕಚ್ಛಾ ಸಾಮಾಗ್ರಿಗಳು ದೊರಕಿದ್ದವು. 

SCROLL FOR NEXT