ರಾಜ್ಯ

ನಳಿನ್ ಕುಮಾರ್ ಕಟೀಲ್ ರ ದಕ್ಷಿಣ ಕನ್ನಡದಲ್ಲಿ ಬಯಲು ಶೌಚ ಇನ್ನೂ ಜೀವಂತ

Manjula VN

ಮಂಗಳೂರು: ಬಯಲು ಶೌಚ ಮುಕ್ತ ಜಿಲ್ಲೆಯೆಂದು ಘೋಷಣೆ ಹೊರತಾಗಿಯೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ದಕ್ಷಿಣ ಕನ್ನಡದಲ್ಲಿ ಬಯಲು ಶೌಚ ಇನ್ನೂ ಜೀವಂತವಾಗಿದೆ. 

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫ್ಲಾಗ್ ಶಿಪ್ ಯೋಜನೆಯ ಸಂಸದರ ಆದರ್ಶ ಗ್ರಾಮದಡಿ ದಕ್ಷಿಣ ಕನ್ನಡ ಜಿಲ್ಲೆಯ ಬಲ್ಪ್ ಗ್ರಾಮವನ್ನು ನಳಿನ್ ಕುಮಾರ್ ಕಟೀಲ್ ಅವರು 6 ವರ್ಷಗಳ ಹಿಂದೆ ದತ್ತು ಪಡೆದುಕೊಂಡಿದ್ದರು. ಮಾದರಿ ಗ್ರಾಮವಾಗಿ ನಿರ್ಮಾಣ ಮಾಡುತ್ತೇನೆಂದು ಪ್ರತಿಜ್ಞೆ ಮಾಡಿದ್ದರು. 

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಎಂದೂ ಕೂಡ ಘೋಷಣೆ ಮಾಡಲಾಗಿತ್ತು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರು ದತ್ತು ಪಡೆದುಕೊಂಡಿದ್ದ ಗ್ರಾಮದಲ್ಲಿ ಇನ್ನೂ ಬಯಲು ಶೌಚ ಜೀವಂತವಾಗಿದೆ. ಗ್ರಾಮದಲ್ಲಿರುವ ದಲಿತ ಕುಟುಂಬಗಳು ಮನೆಗಳಲ್ಲಿ ಶೌಚಾಲಯಗಳಿಲ್ಲದ ಕಾರಣ ಬಯಲು ಶೌಚ ಬಳಕೆ ಮಾಡುತ್ತಿದ್ದಾರೆ. 

ಗ್ರಾಮ ಪಂಚಾಯತಿ ಬಳಿ ಮನವಿ ಮಾಡಿಕೊಂಡಿದ್ದರೂ ನಮ್ಮ ಮನೆಗಳಲ್ಲಿ ಶೌಚಾಲಯಗಳಿಲ್ಲ. ನಮ್ಮ ಕುಟುಂಬ ಸದಸ್ಯರು ಬಯಲಿನಲ್ಲಿಯೇ ಶೌಚ ಮಾಡುತ್ತಿದ್ದಾರೆಂದು ಬಲ್ಪ ಗ್ರಾಮದ ಕೊನ್ನಡ್ಕಾ ಕಾಲೋನಿಯ ನಿವಾಸಿ ಶಂಕರಿ ಹೇಳಿದ್ದಾರೆ. 

ಸಂಸದರು ದತ್ತು ಪಡೆದುಕೊಂಡ ಬಳಿಕ ನಮ್ಮ ಗ್ರಾಮ ಅಭಿವೃದ್ಧಿಗೊಳ್ಳಲಿದೆ ಎಂದು ತಿಳಿಸಿದ್ದೆವು. ಆದರೆ, ಗ್ರಾಮದಲ್ಲಿ ಇನ್ನೂ ಯಾವುದೇ ರೀತಿಯ ಅಭಿವೃದ್ಧಿಗಳಾಗಿಲ್ಲ ಎಂದು ತಿಳಿಸಿದ್ದಾರೆ. 

ರಾತ್ರಿ ವೇಳೆ ಹೊರಗೆ ಹೋಗಬೇಕೆಂದರೆ ಭಯವಾಗುತ್ತದೆ. ಮನೆಗಳಲ್ಲಿ ಇನ್ನೂ ವಿದ್ಯುತ್ ಸಂಪರ್ಕಗಳನ್ನು ನೀಡಿಲ್ಲ ಎಂದಿದ್ದಾರೆ. 

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಮಾತನಾಡಿ, ಗ್ರಾಮದಲ್ಲಿರುವ 46 ಮನೆಗಳಲ್ಲಿ ಶೌಚಾಲಯಗಳಿಲ್ಲ ಎಂದು ಹೇಳಿದ್ದಾರೆ. 

SCROLL FOR NEXT