ರಾಜ್ಯ

ನಕಲಿ ಜಾತಿ ಪ್ರಮಾಣಪತ್ರ: ನಿವೃತ್ತ ಡಿವೈಎಸ್ಪಿ ಮಕ್ಕಳ ವಿರುದ್ಧ ಪ್ರಕರಣ ದಾಖಲು

Nagaraja AB

ಮೈಸೂರು: ನಕಲಿ ಜಾತಿ ಪ್ರಮಾಣ ಪಡೆದಿರುವ ದೂರಿನ ಹಿನ್ನೆಲೆಯಲ್ಲಿ ನಿವೃತ್ತ ಡಿವೈಎಸ್ಪಿಯ ಪುತ್ರ ಹಾಗೂ ಪುತ್ರಿಯ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ನಜರಾಬಾದ್ ಠಾಣೆಯಲ್ಲಿ ಮಗನ ವಿರುದ್ಧ ಹಾಗೂ ಟಿ ನರಸೀಪುರ ಠಾಣೆಯಲ್ಲಿ ಮಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ನಿವೃತ್ತ ಡಿವೈಎಸ್ಪಿ ಎಂ ಚಲುವರಾಜು ಮಕ್ಕಳಾದ ಗುರುವಿನಾಯಕ್ ಮತ್ತು ಗ್ರೀಸ್ಮಾ ಪರಿವಾರ ಸಮುದಾಯಕ್ಕೆ ಸೇರಿದವರಾಗಿದ್ದು, ಕ್ಯಾಟಗರಿ 1ರಲ್ಲಿ ಬರುತ್ತಾರೆ. ಆದರೆ, ನಾಯಕ ಸಮುದಾಯದ ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದರು. 

ಈ ಸಂಬಂಧ ಸಲ್ಲಿಕೆಯಾದ ದೂರಿನ ಅನ್ವಯ ತನಿಖೆ ನಡೆಸಿದ ಜಿಲ್ಲಾಧಿಕಾರಿಗಳು, ನಿಯಮ ಉಲ್ಲಂಘಿಸಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವುದನ್ನು ದೃಢಪಡಿಸಿದ್ದಾರೆ.

ನಂತರ ನಾಗರಿಕ ಹಕ್ಕು ಜಾಗೃತ ದಳದ ಎಸ್ಪಿ,  ಅಪರಾಧ ಪ್ರಕರಣ ದಾಖಲಿಸಿಕೊಳ್ಳುವಂತೆ ಇನ್ಸ್ ಪೆಕ್ಟರ್ ಗೆ ನಿರ್ದೇಶನ ನೀಡಿದ್ದು, ಪರಿಶಿಷ್ಟ ಜಾತಿ, ಪಂಗಡದ ವಿರುದ್ಧದ ದೌರ್ಜನ್ಯ ಕಾಯ್ದೆಯಡಿ ವಿಚಾರಣೆ ನಡೆಸುವಂತೆ ತಿಳಿಸಿದ್ದಾರೆ.

2013ರಲ್ಲಿ ಸೇವೆಯಿಂದ ಸ್ವಯಂ ನಿವೃತ್ತಿಯಾದ ಚಲುವರಾಜು ಕೂಡಾ ಇದೇ ರೀತಿಯ ಪ್ರಕರಣ ಎದುರಿಸಿದ್ದರು. 1978ರಲ್ಲಿ ನಕಲಿ ಪ್ರಮಾಣ ಪತ್ರಗಳ ಮೂಲಕ  ಪಿಎಸ್ ಐ ಹುದ್ದೆಗೆ ಸೇರ್ಪಡೆಯಾಗಿದ್ದರು.

SCROLL FOR NEXT