ರಾಜ್ಯ

ನಾವು ಹಸಿದುಕೊಂಡರೂ ಪರವಾಗಿಲ್ಲ, ಮನೆಗೆ ಬಂದವರಿಗೆ ಮೊದಲು ಊಟ ಹಾಕಬೇಕು: ರಾಮದಾಸ್

Shilpa D

ಮೈಸೂರು: ತಮಗೆ ಅಧಿಕಾರ ಮುಖ್ಯವಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ನಾಯಕರಾಗಿದ್ದು, ಅವರ ಸಾರಥ್ಯದಲ್ಲಿ ನಾವೆಲ್ಲಾ ಮುನ್ನಡೆಯುತ್ತೇವೆ ಎಂದು ಮಾಜಿ ಸಚಿವ, ಶಾಸಕ ರಾಮದಾಸ್ ಹೇಳಿದ್ದಾರೆ.

ಸಚಿವ ಸಂಪುಟದಲ್ಲಿ ಸ್ಥಾನಮಾನ ಸಿಗಲಿ, ಸಿಗದೆ ಇರಲಿ ಎಂದಿಗೂ ಯಡಿಯೂರಪ್ಪ ಅವರ ಜತೆ ಇರುತ್ತೇವೆ. ಅಧಿಕಾರಕ್ಕಾಗಿ ಅವರ ಮೇಲೆ ಒತ್ತಡ ಹೇರುವ ಕೆಲಸ ಮಾಡವುದಿಲ್ಲ ಎಂದಿದ್ದಾರೆ.


ಮೊದಲು ಮನೆಗೆ ಬಂದವರಿಗೆ ಊಟ ಹಾಕಬೇಕು. ನಾವು ಹಸಿದುಕೊಂಡಿದ್ದರು ಪರವಾಗಿಲ್ಲ ಅವರಿಗೆ ಊಟ ಹಾಕ್ತಿವಿ. ಅರ್ಹತೆ ವಿಚಾರದಲ್ಲಿ ಈ ಭಾಗದಲ್ಲಿ ನಾನೋಬ್ಬನೆ ಬಿಜೆಪಿಯಲ್ಲಿ ಹಳಬಾ.  ಆದರೆ, ಈಗ ಪರಿಸ್ಥಿತಿ ಆ ರೀತಿ ಇಲ್ಲ, ಸಂಘ ನನಗೆ ಒಂದು ಶಿಸ್ತು ಕಲಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನಾನು ಹೇಗೆ ವರ್ತಿಸಬೇಕು ಅನ್ನೋದನ್ನ ನಾನು ಕಲಿತಿದ್ದೇನೆ. ಹಾಗಾಗಿ ಉಮೇಶ್ ಕತ್ತಿ ಹೇಳಿಕೆ ಅವರಿಗೆ, ನನ್ನ ಅಭಿಪ್ರಾಯ ನನಗೆ ಎಂದು ಅವರು ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ತಮ್ಮದು ಹಗ್ಗದ ಮೇಲಿನ ನಡಿಗೆ ಎಂದಿದ್ದಾರೆ. ಅವರು ಈ ರೀತಿ ಏಕೆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಯಡಿಯೂರಪ್ಪ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವಷ್ಟು ದೊಡ್ಡವರು ತಾವಲ್ಲ. ಅದೇನೇ ಇರಲಿ ಅವರು ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ತಾವೆಲ್ಲ ಅವರ ಜತೆಗೆ ಇರುವುದಾಗಿ ಸ್ಪಷ್ಟಪಡಿಸಿದರು.

SCROLL FOR NEXT