ಬೆಂಗಳೂರಿನ 2 ಖಾಸಗಿ ಲ್ಯಾಬ್ ಗಳಲ್ಲಿ ರೋನಾ ಪರೀಕ್ಷೆ ಸೌಲಭ್ಯ: ಟೆಸ್ಟ್ ಗೆ ಹಣ ಎಷ್ಟು ಗೊತ್ತೆ?
ಬೆಂಗಳೂರಿನಲ್ಲಿ ಕೊರೋನಾ ಪರೀಕ್ಷಾ ಸೌಕರ್ಯವನ್ನು ಒದಗಿಸಲಾಗಿದೆ. ನಗರದ ಎರಡು ಖಾಸಗಿ ಲ್ಯಾಬ್ಗಳಲ್ಲಿ ಇನ್ನು ಮುಂದೆ ಕೊರೋನಾ ಪರೀಕ್ಷೆ ಮಾಡಲಾಗುತ್ತದೆ.
ಬೆಂಗಳೂರು: ಬೆಂಗಳೂರಿನಲ್ಲಿ ಕೊರೋನಾ ಪರೀಕ್ಷಾ ಸೌಕರ್ಯವನ್ನು ಒದಗಿಸಲಾಗಿದೆ. ನಗರದ ಎರಡು ಖಾಸಗಿ ಲ್ಯಾಬ್ಗಳಲ್ಲಿ ಇನ್ನು ಮುಂದೆ ಕೊರೋನಾ ಪರೀಕ್ಷೆ ಮಾಡಲಾಗುತ್ತದೆ.
ಶಿವಾಜಿನಗರದ ನ್ಯೂಬರ್ಗ್ ಆನಂದ್ ಲ್ಯಾಬ್ ಮತ್ತು ಬಸವನಗುಡಿಯ ಕ್ಯಾನ್ಸೈಟ್ ಟೆಕ್ನಾಲಜೀಸ್ಗಳಲ್ಲಿ ಕೊರೋನಾ ಪರೀಕ್ಷೆ ಮಾಡಲಾಗುತ್ತದೆ. ಈ 2 ಲ್ಯಾಬ್ಗಳಿಗೆ ಐಸಿಎಂಆರ್ ಪರವಾನಗಿ ನೀಡಿದೆ. ಈ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವವರು ಅದಕ್ಕೆ ಹಣ ತೆರಬೇಕಿದೆ.
ಮೊದಲ ಹಂತದ ಪರೀಕ್ಷೆ- 3000 ರೂ, ಮರುದೃಢೀಕರಣ ಪರೀಕ್ಷೆ- 1500 ರೂ ನಿಗದಿ ಮಾಡಲಾಗಿದೆ. ಈ ದರವನ್ನು ಐಸಿಎಂಆರ್ ನಿಗದಿ ಮಾಡಿದ್ದು ಒಟ್ಟಾರೆ ಪರೀಕ್ಷಾ ವೆಚ್ಚ 4500 ಮೀರುವಂತಿಲ್ಲ.
ಇನ್ನು, ಸರ್ಕಾರಿ ಲ್ಯಾಬ್ಗಳು ಕೂಡಾ ಎಂದಿನಂತೆ ಪರೀಕ್ಷೆ ನಡೆಸುತ್ತವೆ. ಖಾಸಗಿ ಪ್ರಯೋಗಾಲಯಗಳಲ್ಲೂ ಜನ ತೆರಳಿದರೆ ಹೆಚ್ಚು ಜನರಿಗೆ ಪರೀಕ್ಷೆ ಮಾಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಐಸಿಎಂಆರ್ ಈ ಕ್ರಮ ಕೈಗೊಂಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.