ರಾಜ್ಯ

7-9ರವರೆಗೆ ಪರೀಕ್ಷೆ ಇಲ್ಲದೆ ನೇರ ಪಾಸ್; ಶೀಘ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ದಿನಾಂಕ ಪ್ರಕಟ: ಸುರೇಶ್ ಕುಮಾರ್

Raghavendra Adiga

ಬೆಂಗಳೂರು: 7ರಿಂದ 9ನೆ ತರಗತಿವರೆಗೆ ಪರೀಕ್ಷೆಯಿಲ್ಲದೇ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗುವುದು. ಏಪ್ರಿಲ್ 14 ರ ನಂತರ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಇಂಗ್ಲೀಷ್ ಪರೀಕ್ಷೆ ನಡೆಸಲಾಗುತ್ತಿದ್ದು, ಆದಷ್ಟು ಬೇಗ ದಿನಾಂಕ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು. ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲಾಗುವುದು. ಏಪ್ರಿಲ್ 14ರ ನಂತರ ಎಸ್.ಎಸ್.ಎಲ್.ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು. 7 ರಿಂದ 9ರವರೆಗೆ ಪರೀಕ್ಷೆಯಿಲ್ಲದೇ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗುವುದು. ಹಿಂದಿನ ಪರೀಕ್ಷೆಯ ಅಂಕಗಳ‌ನ್ನು ಪರೀಕ್ಷಿಸಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುವುದು ಎಂದರು.

ಕೊರೊನಾ ಸೋಂಕಿನ ವಿರುದ್ಧ ಹೋರಾಡುವುದೂ ಒಂದು ಪರೀಕ್ಷೆಯಾಗಿದೆ. ಯಾರೂ ಮನೆಯಿಂದ ಹೊರಬರಬಾರದು. ಪ್ರತಿನಿತ್ಯ ಇನ್ನಷ್ಟು ಪುಸ್ತಕಗಳನ್ನು ಓದಿ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬೇಕು. ಮಕ್ಕಳ ಆತಂಕದ ಬಗ್ಗೆ ತಿಳಿದಿದ್ದು, ಸರ್ಕಾರ ಅವರ ಜೊತೆ ಯಾವಾಗಲೂ ಇರುವುದಾಗಿ ಸುರೇಶ್ ಕುಮಾರ್ ಭರವಸೆ ನೀಡಿದರು

7-9 ತರಗತಿಗಳಿಗೆ ಪರೀಕ್ಷೆ ನಡೆಸದೇ ಮುಂದಿನ ತರಗತಿಗೆ ತೇರ್ಗಡೆ ಮಾಡಲು‌ ನಿರ್ಧರಿಸಲಾಗಿದೆ. ಸಿಬಿಎಸ್‌ಸಿಗೆ , 7-9 ತರಗತಿಯವರೆಗೂ ಪರೀಕ್ಷೆಯಿಲ್ಲದೇ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುವುದು. ಯಾವುದೇ‌ ಷರತ್ತು ಇಲ್ಲದೇ ಉತ್ತೀರ್ಣಗೊಳಿಸಲಾಗುವುದು. 9ನೇ ತರಗತಿ ವಿದ್ಯಾರ್ಥಿಗಳು ಆಂತರಿಕ ಪರೀಕ್ಷೆಯ ಆಧಾರದ ಮೇಲೆ 10ನೇ ತರಗತಿಗೆ ತೇರ್ಗಡೆಗೊಳಿಸಲಾಗುವುದು. ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳು ರಜಾ ದಿನದಲ್ಲಿ ಓದಬೇಕು. ಶಾಲೆ ಆರಂಭವಾದಾಗ ಮತ್ತೆ ಪರೀಕ್ಷೆ ನಡೆಸಿ ಕಲಿಕಾ ಮಟ್ಟ ಪರೀಶೀಲಿಸಲು ನಿರ್ಧರಿಸಲಾಗಿದೆ ಎಂದರು.

ಪರೀಕ್ಷೆ ಮುಂದೂಡಿರುವುದಕ್ಕೆ ವಿದ್ಯಾರ್ಥಿಗಳು ಹತಾಶರಾಗಬಾರದು: ಶಿಕ್ಷಣ ಸಚಿವ ಸುರೇಶ್ ಕುಮಾರ್
ಬೆಂಗಳೂರು, ಏ ೨(ಯುಎನ್‌ಐ) ಪರೀಕ್ಷೆಗಳನ್ನು ಮುಂದೂಡಿರುವುದಕ್ಕೆ ವಿದ್ಯಾರ್ಥಿಗಳು ಹತಾಶರಾಗಬಾರದು, ಏಪ್ರಿಲ್ ೧೪ರ ನಂತರ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.

ಈ ಕುರಿತಂತೆ ಸಾಮಾಜಿಕ ಮಾಧ್ಯಮ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿರುವ ಶಿಕ್ಷಣ ಸಚಿವರು. ವಿದ್ಯಾರ್ಥಿಗಳು , ಪೋಷಕರು ಗೊಂದಲ, ಭಯ ಭೀತಿಗೊಳಗಾಗುವ ಅವಶ್ಯಕತೆಯಿಲ್ಲ. ಪರೀಕ್ಷೆ ಇಲ್ಲ ವಿದ್ಯಾರ್ಥಿಗಳು ಸಮಯ ವ್ಯರ್ಥಮಾಡದೆ ಮನೆಯಲ್ಲಿಯೇ ಕುಳಿತುಕೊಂಡು ಪರೀಕ್ಷಾ ಸಿದ್ದತೆ ನಡೆಸುವಂತೆ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

SCROLL FOR NEXT