ಡಾ. ದೇವಿ ಶೆಟ್ಟಿ 
ರಾಜ್ಯ

ಲಾಕ್ ಡೌನ್ ನಿಂದಾದ ಉಪಯೋಗಗಳೇನು? ಏ.14 ನಂತರ ಮುಂದುವರೆಸಬಹುದೇ ಎಂಬ ಬಗ್ಗೆ ಡಾ. ದೇವಿ ಶೆಟ್ಟಿ ಹೇಳಿದ್ದಿಷ್ಟು....

ಕೊರೋನಾ ತಡೆಗೆ 21 ದಿನಗಳ ಲಾಕ್ ಡೌನ್ ನಿಂದಾದ ಪ್ರಯೋಜನಗಳೇನು, ಏ.14 ರ ನಂತರವೂ ಅದನ್ನು ಮುಂದುವರೆಸಬಹುದೇ ಎಂಬ ಬಗ್ಗೆ ಖ್ಯಾತ ಹೃದಯ ಶಸ್ತ್ರಚಿಕಿತ್ಸ ತಜ್ಞರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಮಾತನಾಡಿದ್ದಾರೆ. 

ಬೆಂಗಳೂರು: ಕೊರೋನಾ ತಡೆಗೆ 21 ದಿನಗಳ ಲಾಕ್ ಡೌನ್ ನಿಂದಾದ ಪ್ರಯೋಜನಗಳೇನು, ಏ.14 ರ ನಂತರವೂ ಅದನ್ನು ಮುಂದುವರೆಸಬಹುದೇ ಎಂಬ ಬಗ್ಗೆ ಖ್ಯಾತ ಹೃದಯ ಶಸ್ತ್ರಚಿಕಿತ್ಸ ತಜ್ಞರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಮಾತನಾಡಿದ್ದಾರೆ. 

"21 ದಿನಗಳ ನಂತರ ಲಾಕ್ ಡೌನ್ ನ್ನು ಹಿಂಪಡೆಯಬಹುದು, ಕೋವಿಡ್-19 ಪ್ರಕರಣಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ  ಮಾತ್ರವೇ ಲಾಕ್ ಡೌನ್ ವಿಧಿಸಬಹುದಾಗಿದೆ. ದೇಶಾದ್ಯಂತ 21 ದಿನಗಳ ಲಾಕ್ ಡೌನ್ ನ್ನು ಮುಂದುವರೆಸುವುದು ವೈದ್ಯಕೀಯ ದೃಷ್ಟಿಯಿಂದ ಯಾವುದೇ ವ್ಯತ್ಯಾಸವನ್ನೂ ಉಂಟುಮಾಡುವುದಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ. 

ಎಷ್ಟು ಸಾಧ್ಯವೋ ಅಷ್ಟು ಜನರನ್ನು ಪರೀಕ್ಷೆಗೊಳಪಡಿಸಿ, ಯಾವ ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತವೋ ಅಲ್ಲಿ ಮಾತ್ರ ಲಾಕ್ ಡೌನ್ ಮಾಡಿಸಿ ಆಗ ಕೊರೋನಾ ಹರಡುವಿಕೆ ತಡೆಗಟ್ಟಬಹುದು ಎಂದು ದೇವಿಶೆಟ್ಟಿ ಹೇಳಿದ್ದಾರೆ. 

ಭಾರತದಲ್ಲಿ ಕೋವಿಡ್-19 ರ ಪ್ರಕರಣಗಳು ಇನ್ನೂ 2-3 ವಾರಗಳು ಏರಿಕೆ ಕಾಣಲಿವೆ. ಈಗಿನ ಪರಿಸ್ಥಿತಿ ನಿಭಾಯಿಸಬಹುದಾಗಿದೆ. 21 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ನಿಂದ ಕೊರೋನಾ ವೈರಸ್ ಸಾವಿನ ಪ್ರಮಾಣವನ್ನು ಶೇ.50 ರಷ್ಟು ಕಡಿಮೆ ಮಾಡಲಿದೆ. ಈ ಅವಧಿಯ ಲಾಕ್ ಡೌನ್ ನಿಂದ ಬಹಳ ಪ್ರಯೋಜನವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಡಾ.ದೇವಿಶೆಟ್ಟಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT