ರಾಜ್ಯ

ಕೊರೋನಾ ಕಂಟಕ ಪರಿಹಾರಕ್ಕೆ ಒಂದು ವರ್ಷದ ವೇತನ ದೇಣಿಗೆ ನೀಡಿದ ಸಚಿವ ಜಗದೀಶ್ ಶೆಟ್ಟರ್

Raghavendra Adiga

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್ ಶೆಟ್ಟರ್ ರಾಜ್ಯದ ಕೋವಿಡ್-19 ಹಾವಳಿ ತಡೆ ಪರಿಹಾರ ನಿಧಿಗೆ ತಮ್ಮ ಒಂದು ವರ್ಷದ ವೇತನವನ್ನು ದೇಣಿಗೆ ನೀಡಿದ್ದಾರೆ.

ತಾವು ದೇಣಿಗೆ ನೀದುವ ವಿಚಾರವನ್ನು ಸಚಿವ ಶೆಟ್ಟರ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ರಾಜ್ಯ್ ಸರ್ಕಾರ ಎಲ್ಲಾ ಬಗೆಯಲ್ಲಿ ಕ್ರಮ ತೆಗೆದುಕೊಳ್ಳುತ್ತಿದೆ. ಸೋಂಕು ಲಕ್ಷಣ ಇರುವ ಮಂದಿಗೆ ಮತ್ತು ರೋಗಿಗಳಿಗೆ ಸರ್ಕಾರವೇ ಚಿಕಿತ್ಸೆ ಒದಗಿಸುತ್ತಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಉದಾರ ನೆರವು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಇದಕ್ಕೆ ಮುನ್ನ ಬಸನಗೌಡ ಪಾಟೀಲ್ ಯತ್ನಾಳ್, ಸಚಿವರಾದ ಕೆ.ಎಸ್. ಈಶ್ವರಪ್ಪ ಸಹ ಕೊರೋನಾ ಪರಿಹಾರ ನಿಧಿಗೆ ನೆರವು ನೀಡಿದ್ದರು. ಬುಧವಾರ ಸಿಎಂ ಯಡಿಯೂರಪ್ಪ ಕೊರೋನಾ ಸಂಕಷ್ಟ ಪರಿಹಾರಕ್ಕೆ ತಮ್ಮ ಒಂದು ವರ್ಷದ ವೇತನ ನೀಡಿ ಉದಾರತೆ ಮೆರೆದಿದ್ದರು.

SCROLL FOR NEXT