ರಾಜ್ಯ

ಬೆಂಗಳೂರು ಕಾರಾಗೃಹದ 99 ವಿಚಾರಣಾಧೀನ ಕೈದಿಗಳ ಬಿಡುಗಡೆ

Shilpa D

ಬೆಂಗಳೂರು: ಕೋವಿದ್ 19ಹರಡದಂತೆ ತಪ್ಪಿಸಲು ಸುಪ್ರಿಂಕೋರ್ಟ್ ನಿರ್ದೇಶನದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ  ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಿದೆ.

ಅದರ ಅಂಗವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ 99 ಕೈದಿಗಳನ್ನು ಬುಧವಾರ ಬಿಡುಗಡೆ ಮಾಡಿದೆ. ರಾಜ್ಯದ ಒಟ್ಟು 383 ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ್ದು, ಅದರಲ್ಲಿ ಬೆಂಗಳೂರಿನ ಜೈಲಿನಿಂದ ಬಿಡುಗಡೆೊಳಿಸಬೇಕಿದೆ.

ಜಿಲ್ಲಾ ಕಾನೂನು ಸಮಿತಿ ಅನುಮೋದನೆ ನೀಡಿದ ನಂತರ ಮತ್ತೊಂದು ಬ್ಯಾಚ್ ಕೈದಿಗಳ ಬಿಡುಗಡೆಯಾಗಲಿದೆ. ಕೋರ್ಟ್ ಅನುಮತಿ ನೀಡಿದ ನಂತರ ರಾಜ್ದ ಎಲ್ಲಾ ಜೈಲುಗಳಲ್ಲಿರುವ ವಿಚಾರಣಾಧೀನ ಕೈದಿಗಳು  ಬಿಡುಗಡೆಯಾಗಲಿದ್ದಾರೆ.

ಉನ್ನತ ಮಟ್ಟದ ಸಮಿತಿಯು ರೂಪಿಸಿದ ಮಾರ್ಗಸೂಚಿಗಳ ಪ್ರಕಾರ, ಮೊದಲ ಬಾರಿ ಅಪರಾಧಿಗಳು ಮತ್ತು ಏಳು ವರ್ಷಗಳಿಗಿಂತ ಕಡಿಮೆ ಜೈಲು ಶಿಕ್ಷೆ ಹೊಂದಿರುವ ಅಪರಾಧಗಳಿಗಾಗಿ ಬಂಧಿಸಲ್ಪಟ್ಟ ವಿಚಾರಣಾಧಿನ ಕೈದಿಗಳು ಬಿಡುಗಡೆಗೆ ಅರ್ಹರಾಗಿದ್ದಾರೆ.

ವಿಚಾರಣಾ ಕೈದಿಗಳ  ಬಿಡುಗಡೆ ಮಾಡುವ ವಿಧಾನವು ಜಾಮೀನು ಪಡೆಯುವಲ್ಲಿ ಆರೋಪಿ ಅನುಸರಿಸುವ ವಿಧಾನವನ್ನು ಹೋಲುತ್ತದೆ. ಅರ್ಹ ಕೈದಿಗಳ ಪಟ್ಟಿಯನ್ನು ಇಲಾಖೆಯು ಸಿದ್ಧಪಡಿಸಿ ಅದನ್ನು ಡಿಎಲ್ ಸಿ ಪರಿಶೀಲಿಸುತ್ತದೆ.  ಡಿಎಲ್ ಸಿ ತನ್ನ ಅನುಮೋದನೆ ನೀಡಿದ ನಂತರ, ನ್ಯಾಯಾಲಯದಿಂದ ಅನುಮತಿ ಪಡೆಯಲಾಗುತ್ತದೆ.

ಜಾಮೀನಿನ ಮೇಲೆ ಬಿಡುಗಡೆಯಾದ ಕೈದಿಗಳು ನ್ಯಾಯಾಲಯವು ನಿರ್ದಿಷ್ಟಪಡಿಸಿದ ವೈಯಕ್ತಿಕ ಬಾಂಡ್ ಒದಗಿಸಬೇಕಾಗುತ್ತದೆ ಮತ್ತು ಅವರು ನಿಯತಕಾಲಿಕವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹಾಜರಾಗಬೇಕಾಗುತ್ತದೆ. ಜಾಮೀನು ಎರಡು ತಿಂಗಳವರೆಗೆ ಮಾನ್ಯವಾಗಿರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಧವಾರ, 99 ಕೈದಿಗಳ ಬಿಡುಗಡೆಯಾಗಿದೆ.ಜಿಲ್ಲಾ ಕಾನೂನು ಸಮಿತಿ ಮತ್ತೊಂದು ಪಟ್ಟಿಯನ್ನು ಪರಿಶೀಲಿಸುತ್ತಿದೆ ಮತ್ತು ಕೆಲವೇ ದಿನಗಳಲ್ಲಿ ಹೆಚ್ಚಿನ ಕೈದಿಗಳನ್ನು ಬಿಡುಗಡೆ ಮಾಡಬಹುದು ಎಂದು  ಕಾರಾಗೃಹ ಮುಖ್ಯ ಅಧೀಕ್ಷಕ ವಿ ಶೇಷಮೂರ್ತಿ ಹೇಳಿದ್ದಾರೆ.
 

SCROLL FOR NEXT