ರಾಜ್ಯ

ಕರ್ನಾಟಕ: 5 ದಿನಗಳಲ್ಲಿ ಶೇ. 6.31 ಕೊರೋನಾ ಸೋಂಕಿತರ ಸಂಖ್ಯೆ ಏರಿಕೆ

Shilpa D

ಬೆಂಗಳೂರು: ಕೊರೋನಾ ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ ಗಣನೀಯ ಪ್ರಮಾಣದಲ್ಲಿ ಏರುತ್ತಲೇ ಇದೆ. ಕಳೆದ 5 ದಿನಗಳಲ್ಲಿ ಶೇ.6.31 ರಷ್ಟು ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. 

ಏಪ್ರಿಲ್ 2 ರ ಮಧ್ಯಾಹ್ನದ ಒಳಗೆ ಕೊರೋನಾ ಪೀಡಿತರ ಸಂಖ್ಯೆ 110 ಇದ್ದು, 10 ಮಂದಿ ಗುಣಮುಖರಾಗಿ ತೆರಳಿದ್ದು ಮೂವರು ಸಾವನ್ನಪ್ಪಿದ್ದಾರೆ. ಮೃತಪಟ್ಟವರೆಲ್ಲಾ 60 ವರ್ಷ ಮೇಲ್ಪಟ್ಟವರಾಗಿದ್ದಾರೆ.
ಮಾರ್ಚ್ 8 ರಿಂದ ಶೇ 20.68 ರಷ್ಟಿದ್ದ  ಕೋವಿದ್ -19 ಪ್ರಕರಣಗಳ  ಸಂಖ್ಯೆ ಈಗ ಶೇ 6.31 ಕ್ಕೆ ಏರಿದೆ ಎಂದು ಕರ್ನಾಟಕದ ದತ್ತಾಂಶ ವಿಶ್ಲೇಷಣೆ ಅಂಕಿ ಅಂಶ ತೋರಿಸಿದೆ. ಕರ್ನಾಟಕದ 30 ಜಿಲ್ಲೆಗಳ ಪೈಕಿ  13 ರಲ್ಲಿ ಏಪ್ರಿಲ್ 2 ರವರೆಗೆ ಶೇ,6.31 ಪ್ರಕರಣಗಳು ವರದಿಯಾಗಿವೆ.

ಈ ಅಂಕಿ ಅಂಶಗಳ ಸಹಾಯದಿಂದಾಗಿ ಅಗತ್ಯವಿರವವರಿಗೆ ಕ್ವಾರಂಟೈನ್, ಪ್ರತ್ಯೇಕ ವಾಸ, ಕೋವಿದ್ 19 ಪರೀಕ್ಷೆ ಮುಂತಾದವುಗಳನ್ನು ಮಾಡಲು ಸಹಾಯವಾಗುತ್ತದೆ. ಜೊತಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಸ್ಟೇಟ್ ವಾರ್ ರೂಂ ನ ನೋಡಲ್ ಅಧಿಕಾರಿ ಮನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ಮಾಹಿತಿ ಮತ್ತು ಜನಸಂಪರ್ಕ ಇಲಾಖೆಯ ಅಂಕಿ ಅಂಶಗಳ  ಪ್ರಕಾರ ಕರ್ನಾಟಕದ ಶೇ. 29 ಸ್ತ್ರೀ ರೋಗಿಗಳು ಯರು ಮತ್ತು ಶೇಕಡಾ 71 ರಷ್ಟು ಪುರುಷರು ಇದ್ದಾರೆಂದು ತಿಳಿದು ಬಂದಿದೆ. ಬೆಂಗಳೂರು ನಗರದಲ್ಲಿ 46 ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದೆ, ಆದರೆ 8 ಮಂದಿ ಚೇತರಿಕೆ ಕಂಡಿದ್ದಾರೆ ಎಂದು ವಿವರಿಸಿದೆ.
 

SCROLL FOR NEXT