ರಾಜ್ಯ

ಚಿಕ್ಕಮಗಳೂರು ಅರಣ್ಯದಲ್ಲಿ ಕಾಡ್ಗಿಚ್ಚು: ನೂರಾರು ಎಕರೆ ಭಸ್ಮ

Shilpa D

ಬೆಂಗಳೂರು: ಕಳೆದ ಕೆಲವು ವಾರಗಳಿಂದ  ಚಿಕ್ಕಮಗಳೂರು ಕಾಡಿನಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಸುಮಾರು 1 ಸಾವಿರ ಎಕರೆ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಬಲಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ. ಸುಮಾರು 350ರಿಂದ 400 ಎಕರೆ ಪ್ರದೇಶ ಹಾನಿಗೊಳಗಾಗಿದೆ ಎಂದು ದೂರಲಾಗಿದೆ.

ವಲಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅನಾಹುತ ಸಂಭವಿಸಿದೆ ಎಂದು ಆರೋಪಿಸಲಾಗಿದ್ದು ಈ ಸಂಬಂಧ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.  ಚಿಕ್ಕಮಗಳೂರಿನ ಚುರ್ಚೆಗುಡ್ಡ, ಕಳಸಾಪುರ ಸಿಂದಿಗೆರೆ ಹಾಗೂ ಕಾಮೇನಹಳ್ಳಿ ವಲಯ ಅರಣ್ಯ ಪ್ರದೇಶಗಳು ಬೆಂಕಿಗಾಹುತಿಯಾಗಿವೆ.

ಅಗ್ನಿ ಅನಾಹುತ ತಡೆಯಲು ವಲಯ ಅರಣ್ಯಾಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಚುರ್ಚೆಗುಡ್ಡ ಅರಣ್ಯದಲ್ಲಿ ಅನೇಕ ಸಂಖ್ಯೆಯ ಚಿರತೆ ಮತ್ತು ಸಾಂಬಾರ್ ಜಿಂಕೆಗಳಿವೆ. ಕಾಮನಹಳ್ಳಿಯಲ್ಲಿ ಖಾಸಗಿ ಭೂಮಾಲೀಕರ ಒಡೆತನವಿದ್ದು, ಅವರು ಅಲ್ಲಿ ಹಚ್ಚುವ ಬೆಂಕಿ ಹರಡಲು ಕಾರಣವಾಗಿದೆ.

SCROLL FOR NEXT