ರಾಜ್ಯ

ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ವಿವಿಧೆಡೆ ಲಘು ಭೂಕಂಪನದ ಅನುಭವ!

Srinivasamurthy VN

ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಹಲವು ಗ್ರಾಮಗಳಲ್ಲಿಂದು ಲಘು ಭೂಕಂಪನ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಇಂದು ಸಂಜೆ ಸುಮಾರು ೫.೨೦ಗಂಟೆ ಸಮಯದಲ್ಲಿ ಬಾರೀ ಶಬ್ದದೊಂದಿಗೆ ೩ರಿಂದ ೫ಸೆಕೆಂಡುಗಳ ಕಾಲ ಭೂಮಿಯು ಇದ್ದಕ್ಕಿದ್ದಂತೆ ಕಂಪಿಸಿದೆ ಎನ್ನಲಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನಗಡಿ ಭಾಗಕ್ಕೆ ಹೊಂದಿಕೊAಡಿರುವ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು  ಹೋಬಳಿಯ ಸಿಂಗನಹಳ್ಳಿ, ಜೈನ್ನಹಳ್ಳಿ, ಅಕ್ಕಿಹೆಬ್ಬಾಳು, ಮಾಚವೊಳಲು, ವಡ್ಡರಗುಡಿ, ಸಾಕ್ಷೀಬೀಡು, ಬೀರುವಳ್ಳಿ, ಮಂದಗೆರೆ, ಬಂಡಿಹೊಳೆ ಮತ್ತಿತರ ಗ್ರಾಮಗಳಲ್ಲಿ ಭೂಕಂಪದ ಅನುಭವವಾಗಿದೆ.

ಭೂಕಂಪನ ಉಂಟಾದ ಕಾರಣ ಹಲವಾರು ಮನೆಗಳಲ್ಲಿ ಸೆಲ್ಪ್ಗಳ ಮೇಲಿದ್ದ  ಪಾತ್ರೆಗಳು, ಪಗಡುಗಳು, ಟಿವಿ ಮತ್ತು ಷೋಕೇಸ್ಗಳ ಮೇಲಿದ್ದ  ಲ್ಯಾಮಿನೇಷನ್ ಪೋಟೋಗಳು, ನೆನಪಿನ ಕಾಣಿಕೆಯಂತಹ ವಸ್ತುಗಳು ಅಲುಗಾಡಿ ಕೆಳಕ್ಕೆ ಬಿದ್ದು ಹೋಗಿವೆ. ಇದರಿಂದ  ಜನರು ಭಯ-ಭೀತರಾಗಿ  ಮನೆಬಿಟ್ಟು ಹೊರಗೆ ಬಂದಿದ್ದಾರೆ.  ಮೊದಲೇ  ಕೋರೋನಾ ವೈರಸ್ ಭಯದಲ್ಲಿದ್ದ ಜನರು ಇದ್ದಕ್ಕಿದ್ದಂತೆ ಭೂಮಿಯು ಕಂಪಿಸಿದ ಕಾರಣ ಜನತೆ ಮತ್ತಷ್ಟು ಕಂಗಾಲಾಗಿದ್ದಾರೆ. 

ಈ ರೀತಿಯು ಅನುಭವವು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸಿಂಗನಹಳ್ಳಿ, ಜೈನ್ನಹಳ್ಳಿ, ಅಕ್ಕಿಹೆಬ್ಬಾಳು, ಮಾಚವೊಳಲು, ವಡ್ಡರಗುಡಿ, ಸಾಕ್ಷೀಬೀಡು, ಬೀರುವಳ್ಳಿ, ಮಂದಗೆರೆ, ಬಂಡಿಹೊಳೆ  ಮತ್ತಿತರ ಗ್ರಾಮಗಳಲ್ಲಿ ಭೂಕಂಪದ ಅನುಭವವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅಕ್ಕಿಹೆಬ್ಬಾಳು ಹೋಬಳಿಯ ಸುತ್ತಮುತ್ತಲ ಗ್ರಾಮಗಳ ಹಲವಾರು ಮಂದಿ ಕರೆ ಮಾಡಿ ಭೂಕಂಪನದ ಬಗ್ಗೆ ಮಾಹಿತಿ ನೀಡಿದ್ದಾರೆ ತಾಲೂಕು ತಹಸೀಲ್ದಾರ್  ಎಂ.ಶಿವಮೂರ್ತಿ ತಿಳಿಸಿದ್ದಾರೆ. 

ಈ ಬಗ್ಗೆ ಮೈಸೂರಿನಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ರಿಕ್ಟರ್ ಮಾಪನದಲ್ಲಿ ದಾಖಲಾಗಿರುವ ಅಂಕಿಅಂಶಗಳನ್ನು  ಮಾಹಿತಿ ಪಡೆದು ನಮ್ಮ ತಾಲೂಕಿನಲ್ಲಿ ಭೂಕಂಪನ ಆಗಿರುವ ಬಗ್ಗೆ ಮಾಹಿತಿ ದಾಖಲಾಗಿದ್ದರೆ  ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.  ಗಣಿ ಮತ್ತು ಭೂ ಇಲಾಕೆಯ ಮಾಹಿತಿಯ ಪ್ರಕಾರ ಲಘುಭೂಕಂಪನವಾಗಿರೋದು ನಿಜ,೨.೫ರಷ್ಟು ಅಲೆಗಳು ರಿಕ್ಟರ್ ಮೂಲಕ ದಾಖಲಾಗಿದೆ ಎಂದು ತಿಳಿದು ಬಂದಿದೆ.
-ನಾಗಯ್ಯ

SCROLL FOR NEXT