ರಾಜ್ಯ

ಮೊದಲ ಬಾರಿಗೆ ಮೈಸೂರಿನಲ್ಲಿ ಸ್ಯಾನಿಟೈಸರ್ ಸುರಂಗ

Shilpa D

ಮೈಸೂರು: ತರಕಾರಿ ಮಾರುಕಟ್ಟೆಗೆ ಬರುವ ಜನರ ಕೈಗಳನ್ನು ಸ್ವಚ್ಚಗೊಳಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ನಿಟ್ಚಿನಲ್ಲಿ ಮೈಸೂರಿನಲ್ಲಿ ಮೊದಲ ಬಾರಿಗೆ ಸೋಂಕು ನಿವಾರಕ ಸುರಂಗವನ್ನು ಸ್ಥಾಪಿಸಲಾಯಿತು.ರಮೇಶ್ ಕಿಕ್ಕೇರಿ ಅವರ ನೇತೃತ್ವದ ತಂಡವು ಸ್ಥಳೀಯವಾಗಿ ವಿನ್ಯಾಸಗೊಳಿಸಿರುವ ಶುಚಿತ್ವ ಮೆಷಿನ್ ಅನ್ನು ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಅಳವಡಿಸಲಾಗಿದೆ.

ಪ್ರತಿದಿನ ಮಾರುಕಟ್ಚೆಗೆ ಸಾವಿರಾರು ಮಂದಿ ಆಗಮಿಸುತ್ತಾರೆ, ಬರುವ ಎಲ್ಲಾ ಮಂದಿಗೂ ಸೋಂಕು ತಗುಲದಂತೆ ಸ್ಯಾನಿಟೈಸನ್ ನೀಡುವುದು ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸವಾಗಿದೆ. ಹೀಗಾಗಿ ಸುರಂಗ ಮಾಡುವುದು ಅನಿವಾರ್ಯ ವಾಗಿತ್ತು , ಅದನ್ನು ಮಾರುಕಟ್ಟೆಯ ಪ್ರವೇಶ ದ್ವಾರದಲ್ಲಿ ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.

ಇದರದಲ್ಲಿ ನೀರು ಮತ್ತು ಸೋಡಿಯಂ ಹೈಪೋಕ್ಲೋರೈಟ್ ಅನ್ನು ಬಳಸಲಾಗಿದೆ. (ಇದನ್ನು ಬ್ಲೀಚ್ ಎಂದು ಕರೆಯಲಾಗುತ್ತದೆ), ಮಾರುಕಟ್ಟೆಗೆ ಹೋಗುವ ಸುರಂಗ ಪ್ರವೇಶಿಸುವ ವ್ಯಕ್ತಿ ತಮ್ಮ ಕೈಗಳನ್ನು ಎತ್ತಿದರೇ ಸ್ಯಾನಿಟೈಸರ್ ಸ್ವಯಂಚಾಲಿತವಾಗಿ ಸಿಂಪಡನೆಯಾಗುತ್ತದೆ.  ಈ ಸುರಂಗ 8 ಅಡಿ ಎತ್ತರ ಮತ್ತು 15 ಅಡಿ ಉದ್ದವಿದೆ.

ಮೊದಲ ದಿನ, ನೂರಾರು ಜನರು ಅದರ ಮೂಲಕ ಹಾದುಹೋದರು ಮತ್ತು ಈ ಕ್ರಮವನ್ನು ಶ್ಲಾಘಿಸಿದರು. ಇದರಿಂದ ಉತ್ತೇಜಿತರಾದ ಎಂಸಿಸಿ ಆಯುಕ್ತ ಗುರುದತ್ತ ಹೆಗ್ಡೆ ಅವರು ಈ ಕ್ರಮವನ್ನು ನಗರದ ಬೇರೆಡೆ ಪುನರಾವರ್ತಿಸುವಂತೆ ಸೂಚಿಸಿದ್ದಾರೆ.  ಶೀಘ್ರದಲ್ಲೇ ಲಲಿತ್‌ಮಹಲ್ ಮೈದಾನ ಮತ್ತು ಬನ್ನಿಮಂಟಾಪ್‌ನಲ್ಲಿ ಪುನರಾವರ್ತಿಸಲಾಗುವುದು.

SCROLL FOR NEXT