ರಾಜ್ಯ

ಹಂತ ಹಂತವಾಗಿ ಲಾಕ್‌ಡೌನ್‌ ತೆಗೆಯಲು ಎಲ್ಲರ ಸಹಕಾರ ಅಗತ್ಯ: ಸುರೇಶ್ ಕುಮಾರ್

Lingaraj Badiger

ಬೆಂಗಳೂರು: ಏಪ್ರಿಲ್ 14ರ ಬಳಿಕ‌ ಲಾಕ್ ಡೌನ್ ಅನ್ನು ಹಂತ ಹಂತವಾಗಿ ತೆಗೆಯುವ ಬಗ್ಗೆ ನಿರ್ಧಾರ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದು, ಅದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

ಮುಖ್ಯಮಂತ್ರಿಗಳ ಜತೆ‌ ಶಾಸಕರು, ಸಂಸದರು, ಸಚಿವರು ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, 7.5ಲಕ್ಷ ಕುಟುಂಬಗಳಿಗೆ ಒಂದು ಲೀಟರ್ ಬೇಡ, ಅರ್ಧ ಲೀಟರ್ ಪ್ಯಾಕೆಟ್ ಕೊಡಿ ಎನ್ನುವ ಸಲಹೆ ಬಂದಿದೆ, ಹಾಗಾಗಿ ಅರ್ಧ ಲೀಟರ್ ಹಾಲು ಕೊಡುತ್ತೇವೆ. ಜನಧನ್ ಯೋಜನೆಯಡಿ 15 ಲಕ್ಷ ಜನರಿಗೆ ಅವರ ಖಾತೆಗೆ ನಿಗದಿತ ಹಣವನ್ನು ಏಪ್ರಿಲ್ 10ರೊಳಗೆ ಹಾಕುವುದಾಗಿ ಹೇಳಿದರು.

ಮುಖ್ಯಮಂತ್ರಿಗಳು ಇವತ್ತು ಬೆಂಗಳೂರಿನ‌ ಶಾಸಕರು, ಸಂಸದರ ಜತೆ ಸಮಾಲೋಚನೆ ನಡೆಸಿದ್ದಾರೆ. ಖಾಸಗಿ‌ ಕ್ಲಿನಿಕ್ ಗಳನ್ನ ತೆರೆಯಬೇಕಿದೆ, ಮೊದಲಿನಂತೆಯೇ ಸೇವೆ ಮುಂದುವರಿಸಬೇಕು. ವಸ್ತುಗಳ ಸೇವೆಯನ್ನು ಮತ್ತಷ್ಟು ವ್ಯವಸ್ಥಿತವಾಗಿ ಮಾಡಬೇಕು. ಅಸಂಘಟಿತ ವಲಯಗಳ ಕಾರ್ಮಿಕರಿಗೆ ಪರಿಹಾರ‌ ಕೊಡಬೇಕು, ಆಹಾರ ಸಾಮಾಗ್ರಿಗಳನ್ನು ಕೊಡಬೇಕು ಎಂದು ಸಲಹೆ ಕೊಟ್ಟಿದ್ದಾರೆ ಎಂದರು.

ಬೆಂಗಳೂರು ರಿಲ್ಯಾಕ್ಸ್ ಮೂಡ್ ಗೆ ಬಂದಿದೆ. ಜನರ ಓಡಾಟ ನಿಯಂತ್ರಣ ಮಾಡಬೇಕು ಎನ್ನುವ ಸಲಹೆ ಬಂದಿದೆ. ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಸುರೇಶ್ ಕುಮಾರ್‌ ಸ್ಪಷ್ಟಪಡಿಸಿದರು.

SCROLL FOR NEXT