ರಾಜ್ಯ

ಕೋರೋನಾ ವೈರಸ್: ಗ್ರಾಮೀಣ ಭಾಗದ ರೋಗಿಳಿಗೆ ಚಿಕಿತ್ಸೆ ಒದಗಿಸಲು ರೈಲ್ವೆ ಸಿದ್ಧ: ಸುರೇಶ್ ಅಂಗಡಿ

Srinivasamurthy VN

ಕಲಬುರಗಿ: ಕೊರೋನಾ ವೈರಸ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಹಾಗೂ ರೈಲು ಸಂಪರ್ಕವಿರುವ ಗ್ರಾಮೀಣ ಭಾಗದ ಜನರಿಗೆ ಚಿಕಿತ್ಸೆ ಒದಗಿಸಲು ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.

ನಿರುಪಯುಕ್ತ 20 ಸಾವಿರ ರೈಲ್ವೆ ಬೋಗಿಗಳನ್ನು ಕೊರೋನಾ ಚಿಕಿತ್ಸೆಗಾಗಿ ಸಜ್ಜುಗೊಳಿಸುತ್ತಿದ್ದು, ಇಂತಹ ಬೋಗಿಗಳಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸಲಕರಣಗಳನ್ನು ಒದಗಿಸಲಾಗುವುದು. ಗ್ರಾಮೀಣ ಭಾಗದ ಜನರಿಗೆ ಚಿಕಿತ್ಸೆ ನೀಡಲು ರೈಲ್ವೆ ಹಗಲಿರುಳು ಶ್ರಮಿಸುತ್ತಿದೆ ಎಂದಿದ್ದಾರೆ.


ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಕೈಗೊಂಡಿರುವ ಕಾರ್ಯಕ್ರಮಗಳಿಗೆ ರೈಲ್ವೆ ಇಲಾಖೆ ಸೂಕ್ತ ರೀತಿಯಲ್ಲಿ ಬೆಂಬಲ ನೀಡುತ್ತಿದೆ. ರೈಲ್ವೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೊರೋನಾ ವೈರಸ್ ನಿಯಂತ್ರಣಕ್ಕಾಗಿ 20 ಸಾವಿರ ರೈಲು ಬೋಗಿಗಳ ಮಾರ್ಪಾಡು; 3.2 ಲಕ್ಷ ಐಸೊಲೇಷನ್‌ ವಾರ್ಡ್‌ ಸಿದ್ಧ
ಏತನ್ಮಧ್ಯೆ ದೇಶದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶದಲ್ಲಿ 20 ಸಾವಿರ ರೈಲು ಬೋಗಿಗಳನ್ನು ಮಾರ್ಪಾಡು ಮಾಡಲಾಗಿದ್ದು, 3.2 ಲಕ್ಷ ಐಸೊಲೇಷನ್‌ ವಾರ್ಡ್‌ ಗಳನ್ನು ಸಿದ್ಧಪಡಿಸಲಾಗಿದೆ. ಇಲಾಖೆ ತನ್ನ 16 ವಲಯಗಳಿಗೆ ಕೂಡ ನಿಗದಿತ ಪ್ರಮಾಣದಲ್ಲಿ ಬೋಗಿಗಳನ್ನು  ಕಾಯ್ದಿರಿಸಲು ಸೂಚಿಸಿದೆ. ಈಗಾಗಲೇ ತೆಲಂಗಾಣದಲ್ಲಿ 486, ಮುಂಬೈನಲ್ಲಿ 482 ಬೋಗಿಗಳು ಕೇಂದ್ರೀಯ ರೈಲ್ವೆ ವಲಯದ ಅಡಿಯಲ್ಲಿ ನಿಗಾ ಇರಿಸಲು ಸಿದ್ಧಗೊಂಡಿವೆ. ಪ್ರತಿ ಬೋಗಿಗಳಲ್ಲಿ16 ಹಾಸಿಗೆಗಳಿದ್ದು ಎಲ್ಲಾ ರೀತಿಯ ವೈದ್ಯಕೀಯ ಸಾಧನಗಳನ್ನು ಕೂಡ ಇರಿಸಲಾಗಿದೆ. ಆಸ್ಪತ್ರೆ  ಕೊಠಡಿಗಳಂತೆಯೇ ಸ್ವಚ್ಛತೆ ಕೂಡ ಕಾಪಾಡಿಕೊಳ್ಳಲಾಗಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

SCROLL FOR NEXT