ರಾಜ್ಯ

ಕೊರೋನಾ ವೈರಸ್: ಎಚ್ಚೆತ್ತ ಹೊಸಪೇಟೆ ಮುಸ್ಲೀಂ ಮುಖಂಡರು, ಸಾಮೂಹಿಕ ಪ್ರಾರ್ಥನೆ ಮಾಡದಂತೆ ಮನವಿ

Srinivasamurthy VN

ಹೊಸಪೇಟೆ: ಬಳ್ಳಾರಿ ಜಿಲ್ಲೆಯಲ್ಲಿ ಐದು ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ನಂತರ ಎಚ್ಚೆತ್ತ ಮುಸ್ಲೀಂ ಮುಖಂಡರು ಸಾಮೂಹಿಕ ಪ್ರಾರ್ಥನೆ ಮಾಡದಂತೆ ಸಮುದಾಯದವರಿಗೆ ಮನವಿ ಮಾಡಿದ್ದಾರೆ.

ಹೊಸಪೇಟೆಯಲ್ಲಿ ತಮ್ಮ ಸಮುದಾಯದ ಮೌಲ್ವಿಗಳನ್ನ ಒಂದೆಡೆ ಸೇರಿಸಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡದಂತೆ ಎಚ್ಚರಿಕೆ ನೀಡಲು ಮುಸ್ಲಿಂ ಮುಖಂಡರು ಮುಂದಾಗಿದ್ದಾರೆ. ನಿನ್ನೆ ತಮ್ಮ ತೋಟದ ಮನೆಯಲ್ಲಿ ಮೌಲ್ವಿಗಳ ಸಭೆ ಕರೆದ ಮಾಜಿ ಶಾಸಕ ಶಿರಾಜ್ ಶೇಖ್  ಸಮಾಜದ ಕೆಲವರು ಮಾಡುತ್ತಿರುವ ತಪ್ಪಿಗೆ ಇಡೀ ಸಮಾಜ ತಲೆ ತಗ್ಗಿಸುವ ಪರಿಸ್ಥಿತಿ ಎದುರಾಗುತ್ತಿದೆ, ಕೊರೊನ ಹರಡುವ ಸಮುದಾಯ ಎನ್ನುವ ಹಣೆಪಟ್ಟಿ ಮುಸ್ಲೀಂ ಸಮುದಾಯಕ್ಕೆ ಬರುತ್ತಿದೆ, ದಯವಿಟ್ಟು ಅದನ್ನ ಅರಿತು ಬದುಕಬೇಕಾಗಿದೆ ನಾವು ಎಂದು ಮನವರಿಕೆಮಾಡಿದರು. ಅಲ್ಲದೆ  ಖುರಾನ್ ಮತ್ತು ಹದೀಸ್ ನಲ್ಲಿ ಸಾಮೂಹಿಕ ಪ್ರಾರ್ಥನೆಯ ಕುರಿತು ಇರುವ ಸಂದೇಶವನ್ನ ಮತ್ತೊಮ್ಮೆ ಮೌಲ್ವಿಗಳಿಗೆ ಮನವರಿಕೆ ಮಾಡಿದರು. 

ಈ ಹಿಂದೆ, ಪ್ಲೇಗ್, ನಂತ ಮಾರಕ ಕಾಯಿಲೆಗಳು ಇದ್ದಾಗ ಕೂಡ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರಲಿಲ್ಲ, ಅದಾದ ಬಳಿಕ ಈಗ ಕೊರೊನ ಸರದಿ,ಈ ಸಂದರ್ಭದಲ್ಲಿ ನಾವು ಕೆಲವು ದಿನಗಳ ಕಾಲ ಸಾಮೋಹಿಕ ಪ್ರಾರ್ಥನೆಯಿಂದ ದೂರ ಉಳಿದ್ರೆ, ನಾವು ಬದುಕುವುದಲ್ಲದೆ  ಸಾಮಾಜವನ್ನ ಮತ್ತು ದೇಶವನ್ನ ಉಳಿಸಿದಂತಾಗುತ್ತೆ ಎಂದರು, ಇನ್ನು ಇದೇ ಸಂದರ್ಭದಲ್ಲಿ ಕಳೆದ ಶುಕ್ರವಾರ ಹಗರಿಬೊಮ್ಮನಹಳ್ಳಿ ತಾಲೂಕಿನ ಬಲ್ಲಹುಣಸೆ ಗ್ರಾಮದಲ್ಲಿ ಸಾಮೋಹಿಕ ಪ್ರಾರ್ಥನೆಯಲ್ಲಿ ಬಾಗಿಯಾಗಿದ್ದ 21ಜನರು ಬಂದನವಾಗಿದ್ದನ್ನ ಕೂಡ ಮೆಲುಕು ಹಾಕಿದರು, ಇದೇ ವೇಳೆ  ದೆಹಲಿಯಲ್ಲಿ ನಡೆದ ಮರ್ಕಜ್ ಮಸೀದಿ ಜಮಾತ್ ನಲ್ಲಿ ಯಾರೇ ಬಾಗಿಯಾಗಿದರು ಅಂತವರು ನೇರವಾಗಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಚಿಕಿತ್ಸೆ ಪಡೆಯಿರಿ ಎಂದು ಮನವಿ ಮಾಡಿದರು.

ಇನ್ನು ಇತ್ತೀಚೆಗೆ ಕೊರೋನಾ ವಿರುದ್ದ ಹೋರಾಡುತ್ತಿರುವ ಸರ್ಕಾರಕ್ಕೆ ಮುಸ್ಲೀಂ ಸಮುದಾಯ ಸಹಕಾರ ನೀಡುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರತೊಡಗಿದವು, ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಗಣಿನಾಡಿನ ಮುಸ್ಲೀಂ ಮುಖಂಡರು, ನಿನ್ನೆ ಹಗರಿಬೊಮ್ಮನಹಳ್ಳಿ ಯಲ್ಲಿ ನೂರಕ್ಕೂ ಹೆಚ್ಚು  ಮೌಲ್ವಿಗಳ ಸಭೆ ಕರೆದು ಈ ಜಾಗೃತಿ ಅಭಿಯಾನವನ್ನ ನಡೆಸಿದರು.

SCROLL FOR NEXT