ರಾಜ್ಯ

ಕೊವಿದ್‍ -19: ಕಾರ್ಯಪಡೆಯಿಂದ ರಾಜ್ಯದಲ್ಲಿ ಮುಂದಿನ ಮೂರು ವಾರಗಳಲ್ಲಿ 80,000 ಪರೀಕ್ಷೆ ನಡೆಸುವ ಗುರಿ

Srinivasamurthy VN

ಬೆಂಗಳೂರು: ಮುಂದಿನ ಮೂರು ವಾರಗಳಲ್ಲಿ 80,000 ರಕ್ತ ಮತ್ತು ಗಂಟಲು ದ್ರವ ಪರೀಕ್ಷೆಗಳನ್ನು ನಡೆಸಲು ಕೊವಿದ್‍ -19 ಕಾರ್ಯಪಡೆ ಉದ್ದೇಶಿಸಿದೆ.

ಒಂದು ಲಕ್ಷ ಪರೀಕ್ಷಾ ಕಿಟ್‌ಗಳ ಖರೀದಿಗೆ ಕೇಳಲಾಗಿದ್ದು, ಏಪ್ರಿಲ್ 12 ರಂದು ಇವು ಪೂರೈಕೆಯಾಗುವ ನಿರೀಕ್ಷೆಯಿದೆ. ಕಾರ್ಯಪಡೆ ನೋಡಲ್ ಅಧಿಕಾರಿ ಸಿ ಎನ್ ಮಂಜುನಾಥ್ ತಿಳಿಸಿದ್ದಾರೆ. 

'ಕಳೆದ ಜನವರಿ 20 ರಿಂದ ಮಾರ್ಚ್ 23 ರವರೆಗೆ 1.2 ಲಕ್ಷಕ್ಕೂ ಹೆಚ್ಚು ಜನರು ವಿದೇಶದಿಂದ ರಾಜ್ಯದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಆಗಮಿಸಿದ್ದಾರೆ. ಈ ಪೈಕಿ 37,358 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಜ್ವರ ಚಿಕಿತ್ಸಾಲಯಗಳು ಮತ್ತು ಆಸ್ಪತ್ರೆಗಳಲ್ಲಿನ ಆರೋಗ್ಯ  ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪರೀಕ್ಷೆಗಳನ್ನು ನಡೆಸಲು ತರಬೇತಿ ನೀಡಲಾಗುತ್ತಿದೆ. 

ಶಂಕಿತ ಸೋಂಕಿತರನ್ನು ಪರೀಕ್ಷಿಸಲು ಒಪ್ಪಿಗೆ ಪತ್ರ ಪಡೆಯುವ ಅಗತ್ಯವಿಲ್ಲ. ಪ್ರಯೋಗಾಲಯಗಳು ಮಾತ್ರ ಶಂಕಿತ ರೋಗಿಗಳ ರಕ್ತ ಮತ್ತು ಗಂಟಲು ದ್ರವ ಪರೀಕ್ಷೆಗಳನ್ನು ಅನುಮತಿ ಪಡೆಯಬೇಕು.' ಎಂದು ಅವರು ಹೇಳಿದ್ದಾರೆ.

SCROLL FOR NEXT