ರಾಜ್ಯ

ತುಮಕೂರು: 150 ಮಂದಿ ವಾಸ ಸಾಮರ್ಥ್ಯದ ಹಾಸ್ಟೆಲ್ ನಲ್ಲಿ 316 ವಲಸಿಗರಿಗೆ ವಸತಿ ವ್ಯವಸ್ಥೆ

Shilpa D

ತುಮಕೂರು: ತುಮಕೂರು ನಗರದಲ್ಲಿರುವ ಎಸ್ ಸಿ ಎಸ್ ಟಿ ಹಾಸ್ಟೆಲ್ ನಲ್ಲಿ ಶನಿವಾರ ರಾತ್ರಿ ರಾಯಚೂರು, ಯಾದಗಿರಿ ಜಿಲ್ಲೆಯ ಸುಮಾರು 316 ವಲಸೆ ಕಾರ್ಮಿಕರಿಗೆ ಉಳಿಯಲು ವ್ಯವಸ್ಥೆ ಮಾಡಲಾಗಿತ್ತು. ಸುಮಾರು 200 ಮಂದಿ ವಾಸ ಯೋಗ್ಯವಾದ ಈ ಹಾಸ್ಟೆಲ್ ನಲ್ಲಿ 316 ಮಂದಿಯನ್ನು ಒಟ್ಟಿಗೆ ಇರಿಸಲಾಗಿದೆ.

ಈ ಸ್ಥಳ ವಾಸಯೋಗ್ಯವಲ್ಲ,ಹೀಗಾಗಿ ಮೂರು ಬಸ್ ಗಳನ್ನು ತರಿಸಿ ಊರಿಗೆ ಹೋಗುವ ವ್ಯವಸ್ಥೆ ಮಾಡುವುದಾಗಿ ಪಿಎಸ್ ಐ ಭರವಸೆ ನೀಡಿದ್ದಾಗಿ ತಿಳಿಸಿದ್ದಾರೆ. ಇರುವ 2 ಬ್ಲಾಕ್ ಗಳಲ್ಲಿ 10 ಶೌಚಾಲಯಗಳಿವೆ ಎಂದು ಕಟ್ಟಡ ಕಾರ್ಮಿಕ ನಾಗರಾಜ್ ಎಂಬುವರು ತಿಳಿಸಿದ್ದಾರೆ.

ನಾಗರಾಜ್ ಅವರಂತೆ ಇತರ ಕಾರ್ಮಿಕರು ಕೂಡ ತಮ್ಮ ಸ್ವಂತ ಸ್ಥಳದಿಂದ ಇಲ್ಲಿಗೆ  ಕುಟುಂಬಸ್ಥರೊಂದಿಗೆ ಉದ್ಯೋಗ ಅರಸಿ ಬಂದಿದ್ದರು,  ಇವರೆಲ್ಲಾ ತಮ್ಮ ತವರಿಗೆ ವಾಪಾಸಾಗುವಾಗ ತಾವರೆಕೆರೆ ಪೊಲೀಸರು ಶಿರಾ ಬಳಿ ಅಡ್ಡ ಹಾಕಿ ಮೊರಾರ್ಜಿ ದೇಸಾಯಿ ಹಾಸ್ಟೆಲ್ ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ.

ಭಾನುವಾರ ಬೆಳಗ್ಗೆ ಹಾಸ್ಟೆಲ್ ಗೆ ಭೇಟಿ ನೀಡಿದ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದರು,  ತಾವು ಹಲವು ದಿನಗಳಿಂದ ಸ್ನಾನ ಮಾಡಿಲ್ಲ, ಹೀಗಾಗಿ ತಮ್ಮ ಊರಿಗೆ ವಾಪಸ್ ತೆರಳಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. 

ಅಂತರ ಜಿಲ್ಲಾ ಸಂಚಾರವನ್ನು ನಿರ್ಬಂಧಿಸಿರುವುದರಿಂದ ಅವರು ಸೌಲಭ್ಯದಿಂದ ಹೊರಹೋಗಲು ಸಾಧ್ಯವಿಲ್ಲ ಎಂದು  ಸರ್ಕಲ್ ಇನ್ಸ್ ಪೆಕ್ಟರ್ ಪಾರ್ವತಮ್ಮ  ಹೇಳಿದ್ದಾರೆ.

ಹಾಸ್ಟೆಲ್ ನಲ್ಲಿ ಶುಚಿತ್ವ ವ್ಯವಸ್ಥೆ ಸುಧಾರಿಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ. ಬೆಳಗಿನ ಉಪಹಾರ ಒದಗಿಸುವುದಾಗಿ ಕಂದಾಯ ಇಲಾಖೆ ತಿಳಿಸಿದೆ.
 

SCROLL FOR NEXT