ರಾಜ್ಯ

ಬೆಂಗಳೂರು: ಕೊನೆಗೂ ಶಿವಾಜಿನಗರ ಸ್ತಬ್ಧ

Lingaraj Badiger

ಬೆಂಗಳೂರು: ಕೊರೋನಾ ಸೋಂಕಿನಿಂದ ಇಡೀ ದೇಶ ಲಾಕ್‌ಡೌನ್‌ ಆಗಿದ್ದರೂ ಬೆಂಗಳೂರಿನ ಹೃದಯ ಭಾಗದಲ್ಲಿರುವ ಶಿವಾಜಿನಗರದಲ್ಲಿ ಲಾಕ್‌ಡೌನ್‌ ಸಮರ್ಪಕವಾಗಿ ಜಾರಿಯಾಗಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು ಬುಧವಾರ ಶಿವಾಜಿನಗರವನ್ನು ಸಂಪೂರ್ಣ ಸ್ತಬ್ಧಗೊಳಿಸಿದ್ದಾರೆ.

ಲಾಕ್‌ಡೌನ್ ಘೋಷಣೆಯಾದ ದಿನದಿಂದಲೂ ನಿನ್ನೆಯವರೆಗೂ ಶಿವಾಜಿನಗರದಲ್ಲಿ ಜನರು, ವರ್ತಕರು, ದ್ವಿಚಕ್ರ ಮತ್ತು ಕಾರುಗಳು ಸಂಚರಿಸುತ್ತಲೆ ಇದ್ದವು. ಶಿವಾಜಿನಗರದ ಜನಜಂಗುಳಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಿದ್ದರೂ ಸಾಧ್ಯವಾಗಿರಲಿಲ್ಲ. ಇಲ್ಲಿನ ರಸೆಲ್ ಮಾರುಕಟ್ಟೆಯಲ್ಲಿ ಬೆಳಗ್ಗೆ ಯಾವಾಗಲೂ ಜನಜಂಗುಳಿ ಇರುತ್ತಿತ್ತು.
ನಗರ ಪೊಲೀಸ್ ಕಮಿಷನರ್ ಭಾಸ್ಕರ್‌ರಾವ್, ಡಿಸಿಪಿ ಶರಣಪ್ಪ ಅವರು ಸ್ಥಳೀಯ ಧರ್ಮಗುರುಗಳ ಜತೆ ಸಭೆ ನಡೆಸಿ ಲಾಕ್‌ಡೌನ್‌ಗೆ ಗೌರವ ನೀಡಬೇಕು ಎಂದು ಸ್ಥಳೀಯರಲ್ಲಿ ಮನವಿ ಮಾಡಿದ್ದರು.

ಈ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದಿರುವ ಸ್ಥಳೀಯರು ಶಿವಾಜಿನಗರವನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಿದ್ದಾರೆ.

ಧರ್ಮಗುರುಗಳ ಮನವಿಗೆ ಬೆಲೆಕೊಟ್ಟ ಅವರು, ನಿನ್ನೆ ರಾತ್ರಿಯಿಂದಲೇ ಲಾಕ್‌ಡೌನ್ ಮಾಡುವ ಮೂಲಕ ಯಾವುದೇ ಅಂಗಡಿಗಳನ್ನು ತೆರೆದಿಲ್ಲ. ಸದಾ ಜನರಿಂದ ತುಂಬಿತುಳುಕುತ್ತಿದ್ದ ಶಿವಾಜಿನಗರ ಇದೀಗ ಸಂಪೂರ್ಣ ಲಾಕ್‌ಡೌನ್ ಆಗಿದ್ದು, ಶಿವಾಜಿನಗರ ಈಗ ಹೇಗಿದೆ? ಎಂಬುದರ ಬಗ್ಗೆ ಪೊಲೀಸರು ಡ್ರೋಣ್ ಮೂಲಕ ಚಿತ್ರೀಕರಿಸಿ ಅದನ್ನು ಬಿಡುಗಡೆ ಮಾಡಿದ್ದಾರೆ.

SCROLL FOR NEXT