ರಾಜ್ಯ

ವೈರಸ್ ಹರಡುವುದು ಭಯೋತ್ಪಾದನೆಯಂತೆ, ಅವರು ದೇಶದ್ರೊಹಿಗಳು: ಚಿಕಿತ್ಸೆಗೆ ಬಾರದ ತಬ್ಲಿಘಿಗಳಿಗೆ ಗುಂಡಿಟ್ಟರೂ ತಪ್ಪಿಲ್ಲ

Shilpa D

ದಾವಣಗೆರೆ:  ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದರ ಬಗ್ಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮಾತನಾಡಿದ್ದಾರೆ. ಚಿಕಿತ್ಸೆ ಪಡೆಯದ ತಬ್ಲಿಘಿಗಳ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗಿಯಾಗಿ ಬಂದು ಚಿಕಿತ್ಸೆ ಪಡೆಯದ ಬಾರದವರನ್ನು ದೇಶದ್ರೋಹಿಗಳು ಎಂದಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು ವೈರಸ್‌ ಹರಡಿಸುವವರು ಭಯೋತ್ಪಾದಕರು ಇದ್ದಂತೆ , ಹೀಗೆ ಮಾಡುವವರನ್ನು ಗುಂಡಿಟ್ಟು ಕೊಂದರು ತಪ್ಪಿಲ್ಲ ಎಂದು ಕೋಪದಿಂದ ಹೇಳಿದ್ದಾರೆ.. 

ಎಲ್ಲಾ ಅಲ್ಪಸಂಖ್ಯಾತರ ಬಗ್ಗೆ ಹೇಳುತ್ತಿಲ್ಲ, ತಬ್ಲಿಗ್‌ಗೆ ಹೋಗಿ ಬಂದು ಸ್ಪಂದನೆ ನೀಡದವರಿಗೆ ಮಾತ್ರ ಎಂದು ಸ್ಪಷ್ಟಪಡಿಸಿದರು. ಚೀನಾದಲ್ಲಿ ಒಬ್ಬನಿಂದ ಇಡೀ ವಿಶ್ವಕ್ಕೆ ಕೊರೋನಾ ಬಂದಿದೆ. ಹಾಗೇ ಯಾರು ಹೋಗಿದ್ದಾರೋ ಅವರು ಚಿಕಿತ್ಸೆ ಪಡೆಯಲು ಮುಂದೆ ಬರಲಿ ಎಂದು ಸಲಹೆ ನೀಡಿದರು.

ಲಾಕ್‌ಡೌನ್ ನಿರ್ಬಂಧವನ್ನು ಉಲ್ಲಂಘನೆ ಮಾಡಿ ದೆಹಲಿಯಲ್ಲಿ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆ ಮಾಡಲಾಗಿತ್ತು. ಸಾವಿರಾರೂ ಸಂಖ್ಯೆಯ ಮುಸ್ಲಿಮರು ಇದರಲ್ಲಿ ಭಾಗಿಯಾಗಿದ್ದರು. ಇಲ್ಲಿಂದ ಬೇರೆ ಬೇರೆ ಭಾಗಗಳಿಂದ ತೆರಳಿದ ತಬ್ಲಿಘಿಗಳಿಂದ ಭಾರತದಲ್ಲಿ ಇನ್ನಷ್ಟು ವೈರಸ್‌ ಜಾಸ್ತಿಯಾಯ್ತು. ಕರ್ನಾಟಕದಲ್ಲಿಯೂ ಪಾಸಿಟಿವ್ ಪ್ರಕರಣಗಳು ಹೆಚ್ಚಾಯ್ತು ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮವನ್ನು ಗಾಳಿಗೆ ತೂರಿದ ರೇಣುಕಾಚಾರ್ಯ ಜನರನ್ನು ಗುಂಪು ಸೇರಿಸಿಕೊಂಡು ಆಹಾರ ಕಿಟ್ ವಿತರಣೆ ಮಾಡಿದರು.  

SCROLL FOR NEXT