ರಾಜ್ಯ

ಇಟಲಿಯಿಂದ ಮರಳಿದ್ದ 17 ಕನ್ನಡಿಗರಲ್ಲಿ ನೆಗೆಟಿವ್; ದೆಹಲಿಯಿಂದ ವಿಶೇಷ ಬಸ್‌ನಲ್ಲಿ ಬೆಂಗಳೂರಿಗೆ

Raghavendra Adiga

ಬೆಂಗಳೂರು: ಕೊರೊನಾ ಸೋಂಕಿನ ಭೀತಿಯಿಂದ ಇಟಲಿಯಿಂದ ಭಾರತಕ್ಕೆ ಆಗಮಿಸಿದ್ದ 17 ಮಂದಿ ಕನ್ನಡಿಗರಲ್ಲಿ ನೆಗೆಟಿವ್ ಕಂಡುಬಂದಿದ್ದು, ಅವರು ರಾಜ್ಯಕ್ಕೆ ವಾಪಾಸಾಗುತ್ತಿದ್ದಾರೆ.

ಸ್ವದೇಶಕ್ಕೆ ಮರಳಿದ್ದ 17 ಮಂದಿ ಕನ್ನಡಿಗರು ದೆಹಲಿಯಲ್ಲಿ ಕ್ವಾರಂಟೈನ್ ಮುಗಿಸಿಕೊಂಡು ನಗರಕ್ಕೆ ಹೊರಟಿದ್ದು, ಎಲ್ಲರಲ್ಲೂ ನೆಗೆಟಿವ್ ಕಂಡುಬಂದಿದೆ.

ಇಟಲಿಯಲ್ಲಿ ನೆಲೆಸಿದ್ದ ಕನ್ನಡಿಗರು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದೆಹಲಿಗೆ ಮರಳಿದ್ದರು. ಅವರೆಲ್ಲರನ್ನು ಮನೆಗೆ ಕಳುಹಿಸದೇ 25 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಕ್ವಾರಂಟೈನ್ ವೇಳೆ ಕೊರೊನಾ ಪರೀಕ್ಷೆ ನಡೆಸಿದ್ದು ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಗುರುವಾರ ರಾಜ್ಯಕ್ಕೆ ಮರಳಲಿದ್ದಾರೆ.

ಕರ್ನಾಟಕ ಭವನ ನಿವಾಸಿ ಆಯುಕ್ತರ ನಿರ್ದೇಶನ ಮೇರೆಗೆ 17 ಮಂದಿ ಬುಧವಾರ ಸಂಜೆ ವಿಶೇಷ ಬಸ್ ಮೂಲಕ ಬೆಂಗಳೂರಿಗೆ ಹೊರಡಲಿದ್ದಾರೆ. 17 ಮಂದಿ ಕನ್ನಡಿಗರ ಜೊತೆಗೆ ತಮಿಳುನಾಡಿನ 14 ಮಂದಿಯೂ ಬರಲಿದ್ದಾರೆ.

ಬಸ್ ಆರಂಭದಲ್ಲಿ ಬೆಂಗಳೂರಿಗೆ ಬರಲಿದ್ದು, ಬಳಿಕ ಚೆನ್ನೈಗೆ ತೆರಳಲಿದೆ. ಬೆಂಗಳೂರು ಮೂಲಕ ಸ್ವಗ್ರಾಮಗಳಿಗೆ ತೆರಳಲು ಇವರಿಗೆ ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗುತ್ತದೆ. ರೋಮ್‌ನಿಂದ ಆಗಮಿಸಿರುವ 13 ಮಂದಿಯ ಮತ್ತೊಂದು ತಂಡ ಸದ್ಯ ಕ್ವಾರಂಟೈನ್ ನಲ್ಲಿದೆ.

ಇಟಲಿಯಲ್ಲಿ 1.35 ಲಕ್ಷ ಮಂದಿಗೆ ಕೊರೊನಾ ಬಂದಿದ್ದು, 17 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 24 ಸಾವಿರಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ.ಳಲಿದ್ದಾರೆ.

SCROLL FOR NEXT