ಸಂಗ್ರಹ ಚಿತ್ರ 
ರಾಜ್ಯ

ಕೊರೋನಾ ಯೋಧರಿಗೆ 50 ಲಕ್ಷ ರೂ. ವಿಮೆ ಘೋಷಿಸಿದ ರಾಜ್ಯ ಸರ್ಕಾರ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ವೈದ್ಯರು ಮತ್ತು ಆರೋಗ್ಯ ಸೇವೆ ಒದಗಿಸುವ ಎಲ್ಲಾ ಸಂಸ್ಥೆಗಳ ಮುಖ್ಯಸ್ಥರಿಗೆ “ಪ್ರಧಾನ್ ಮಂತ್ರಿ ಗರೀಬ್  ಕಲ್ಯಾಣ್ ಪ್ಯಾಕೇಜ್: ಇನ್ಶ್ಯೂರೆನ್ಸ್ ಸ್ಕೀಮ್ ಫಾರ್ ಹೆಲ್ತ್ ವರ್ಕರ್ಸ್ ಫೈಟಿಂಗ್ ಕೋವಿಡ್-19”(Pradhan Mantri Garib Kalyan Package: Insurance Scheme for Health Workers Fighting COVID-19) ಸಂಬಂಧ ಸ

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ವೈದ್ಯರು ಮತ್ತು ಆರೋಗ್ಯ ಸೇವೆ ಒದಗಿಸುವ ಎಲ್ಲಾ ಸಂಸ್ಥೆಗಳ ಮುಖ್ಯಸ್ಥರಿಗೆ “ಪ್ರಧಾನ್ ಮಂತ್ರಿ ಗರೀಬ್  ಕಲ್ಯಾಣ್ ಪ್ಯಾಕೇಜ್: ಇನ್ಶ್ಯೂರೆನ್ಸ್ ಸ್ಕೀಮ್ ಫಾರ್ ಹೆಲ್ತ್ ವರ್ಕರ್ಸ್ ಫೈಟಿಂಗ್ ಕೋವಿಡ್-19”(Pradhan Mantri Garib Kalyan Package: Insurance Scheme for Health Workers Fighting COVID-19) ಸಂಬಂಧ ಸುತ್ತೋಲೆ ಹೊರಡಿಸಿದೆ. ಇದು ಕೊರೋನಾವೈರಸ್ ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರಿಗೆ ವಿಮಾ ರಕ್ಷಣೆಯನ್ನು ನೀಡುತ್ತದೆ

ಕೊರೋನಾವೈರಸ್ ಕಾರಣಕ್ಕಾಗಿ ಆಕಸ್ಮಿಕ ಪ್ರಾಣಹಾನಿ, ಹಾಗೆಯೇ ಕೊರೋನಾ ಸಂಬಂಧಿತ ಕೆಲಸದಲ್ಲಿದ್ದಾಗ ಸಂಭವಿಸುವ ಆಕಸ್ಮಿಕ ಸಾವಿಗೆ ವಿಮಾ ರಕ್ಷಣೆ ಒದಗಿಸುವ ಪ್ರಸ್ತಾವನೆ ಇಲ್ಲಿದೆ.. "ಸೇವೆಯ ಸಮಯದಲ್ಲಿ ಯಾವುದೇ ವ್ಯಕ್ತಿ ಸತ್ತರೆ, ಅವರ ಕುಟುಂಬದವರಿಗೆ  50 ಲಕ್ಷ ರೂ. ವಿಮಾ ಪರಿಹಾರ ನೀಡಲಾಗುವುದು. " ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ  ಸುರೇಶ್ ಕುಮಾರ್ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ಜಾವೇದ್ ಅಖ್ತರ್ “ನಾವು ಏಪ್ರಿಲ್ 12 ರಂದು ಕೋವಿಡ್ ಪರೀಕ್ಷಾ ಕಿಟ್ ಗಳನ್ನು  ಪಡೆಯುತ್ತೇವೆ, ನಂತರ ನಾವು ಶೀಘ್ರದಲ್ಲೇ ಹೆಚ್ಚುವರಿ ಸಂಖ್ಯೆಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ಪ್ರಾರಂಭಿಸಲಿದ್ದೇವೆ. ನಮ್ಮಲ್ಲಿ ಇದುವರೆಗೆ , ಪಿಪಿಇಗಳ ಕೊರತೆ ಆಗಿಲ್ಲ" ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT