ರಾಜ್ಯ

ಬಾಗಲಕೋಟೆ: ಧರ್ಮ ಪ್ರಚಾರಕನಿಗೆ ಸೋಂಕು, ರಹಸ್ಯ ಬೇಧಿಸಲು ಪೊಲೀಸರ ಹರಸಾಹಸ

Manjula VN

ಬಾಗಲಕೋಟೆ: ಧರ್ಮ ಪ್ರಚಾಕರಕರೊಬ್ಬರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ವ್ಯಕ್ತಿಗೆ ವೈರಸ್ ಹೇಗೆ ತಗುಲಿತು ಎಂಬ ರಹಸ್ಯ ಬೇಧಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. 

ಬಾಗಲಕೋಟೆಗೆ ಆಗಮಿಸಿದ್ದ ಗುಜರಾತ್ ಮೂಲದ ಧರ್ಮ ಪ್ರಚಾರಕರಲ್ಲಿ ಮೊದಲ ಬಾರಿಗೆ ವೈರಸ್ ದೃಢಪಟ್ಟಿತ್ತು. ಆರಂಬದಲ್ಲಿ ಮದರಸಾಗೆ ತೆರಳಿದ್ದ 10 ಮಂದಿಯ ಜೊತೆಗೆ ಪ್ರಯಾಣ ಬೆಳೆಸಿದ್ದರಿಂದಾಗಿ ವೈರಸ್ ತಗುಲಿರಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಇದೀಗ ಆ 10 ಮಂದಿಯಲ್ಲೂ ವೈರಸ್ ಇಲ್ಲ ಎಂದು ವೈದ್ಯಕೀಯ ವರದಿಗಳು ತಿಳಿಸಿರುವ ಹಿನ್ನೆಲೆಯಲ್ಲಿ, ವೈರಸ್ ಹೇಗೆ ಬಂದಿತ್ತು ಎಂಬುದನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಇದೀಗ ಸವಾಲಿನ ಪ್ರಶ್ನೆಯಾಗಿ ಪರಿಣಮಿಸಿದೆ. 

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ್ ದೇಸಾಯಿಯವರು ಮಾತನಾಡಿ, ಪ್ರಕರಣದ ಬೇರಿನಿಂದ ನಾವು ಪರಿಶೀಲನೆ ನಡೆಸುವ ಅಗತ್ಯವಿದೆ. ಹಳೇ ಬಾಗಲಕೋಟೆಯಿಂದ ತಪಾಸಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅಲ್ಲಿಯೂ 33 ವರ್ಷದ ವ್ಯಕ್ತಿಯೊಬ್ಬರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ. 

ಗುರುವಾರ ಮದರಸಾದಿಂದ ಬಂದಿದ್ದ 50 ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ಕ್ವಾರಂಟೈನ್'ನಲ್ಲಿ ಇರಿಸಲಾಗಿದೆ. ಇದೇ ವೇಳೆ ಮೂವರು ವ್ಯಕ್ತಿಗಳಲ್ಲೂ ಜಿಲ್ಲೆಯಲ್ಲಿ ವೈರಸ್ ದೃಢಪಟ್ಟಿದೆ. 

ಈ ನಡುವೆ ಸೋಂಕಿತರ ಮೂಲ ಪತ್ತೆಹಚ್ಚುವಲ್ಲಿ ಅಧಿಕಾರಿಗಳು ಬಹುತೇಕ ಯಶಸ್ವಿಯಾಗಿದ್ದು, ಇದೀಗ ಬಾಗಕೋಟೆ ಟೌನ್ ಹಲವು ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿಗಲನ್ನು ನಿಯೋಜಿಸಿ 12,300 ಮಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ 164ನೇ ಸಂಖ್ಯೆ ಸೋಂಕಿತ ವ್ಯಕ್ತಿ ಸಹೋದರ ಕೆಲ ದಿನಗಳ ಹಿಂದಷ್ಟೇ ಕಲಬುರಗಿಗೆ ತೆರಲಿದ್ದು, ಸೋಂಕಿತ ಪ್ರದೇಶವೊಂದರಲ್ಲಿ 2 ದಿನಗಳು ಕಾಲ ಕಳೆದಿದ್ದ. ಇದೀಗ ಆ ವ್ಯಕ್ತಿಯಲ್ಲೂ ವೈರಸ್ ಇರಬಹುದು ಎಂದು ಹೇಳಲಾಗುತ್ತಿದೆ. 

SCROLL FOR NEXT