ರಾಜ್ಯ

ರಾಜ್ಯದಲ್ಲಿ ಮತ್ತೆ 11 ಹೊಸ ಪಾಸಿಟಿವ್ ಪ್ರಕರಣ ದೃಢ: ಸೋಂಕಿತರ ಸಂಖ್ಯೆ 226ಕ್ಕೆ 

Srinivasamurthy VN

ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಒಂದೇ ದಿನ 11 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 226ಕ್ಕೆ ಏರಿಕೆಯಾಗಿದೆ. 

ರಾಜ್ಯ ಸರ್ಕಾರ ಹೊರಡಿಸಿರುವ ಹೆಲ್ತ್‌ ಬುಲೆಟಿನ್‌ನಲ್ಲಿ ಈ ಮಾಹಿತಿ ಬಹಿರಂಗವಾಗಿದ್ದು, ಬೆಳಗಾವಿಯಲ್ಲಿ 4, ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 3, ಕಲಬುರಗಿಯಲ್ಲಿ 2, ಮೈಸೂರು ಮತ್ತು ವಿಜಯಪುರದಲ್ಲಿ  ತಲಾ1 ಪ್ರಕರಣ ದೃಢವಾಗಿದೆ.  

ಬೆಳಗಾವಿಯಲ್ಲಿ ಮತ್ತೆ ನಾಲ್ವರಿಗೆ ಕೋವಿಡ್-19 ತಗುಲಿರುವುದು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಈಗಾಗಲೇ ಒಂದು ಪ್ರಕರಣ ವರದಿಯಾಗಿರುವ ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಮತ್ತೊಂದು ಪ್ರಕರಣ ದೃಢಪಟ್ಟಿದೆ. ಆ ರೋಗಿಯು  ರೋಗಿ ನಂ. 128 ಜೊತೆ ಸಂಪರ್ಕ‌ ಹೊಂದಿದ್ದರು ಎಂದು ತಿಳಿದುಬಂದಿದೆ. 

ಉಳಿದವರು ರಾಯಬಾಗದವರು. ಇವರು ಕೂಡ ರೋಗಿಗಳ ಸಂಪರ್ಕಕ್ಕೆ ಬಂದಿದ್ದವರೇ ಆಗಿದ್ದಾರೆ. ಎಲ್ಲರಿಗೂ  ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರು 19, 38, 55 ಹಾಗೂ 25 ವರ್ಷ ವಯಸ್ಸಿನವರಾಗಿದ್ದಾರೆ.

ಮೈಸೂರಿನಲ್ಲಿ ಒಬ್ಬರಿಗೆ ಕೊರೋನಾ ವೈರಸ್
ಇನ್ನು ಜಿಲ್ಲೆಯಲ್ಲಿ ಭಾನುವಾರ ಒಬ್ಬರಲ್ಲಿ ಕೋವಿಡ್-19 ಪತ್ತೆಯಾಗಿದೆ. 32 ವರ್ಷ ವಯಸ್ಸಿನ ಇವರು ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾನೆಯ ಸೋಂಕಿತ ನೌಕರರ ಸಂಪರ್ಕಕ್ಕೆ ಬಂದಿದ್ದರು. ಸೋಂಕು ಪೀಡಿತರ ಸಂಖ್ಯೆ ಮೈಸೂರಿನಲ್ಲಿ 49 ಕ್ಕೆ ಏರಿದೆ.

ಕಲಬುರಗಿ ವೃದ್ಧನ ಸೊಸೆ, ಆಯಾಗೆ ಸೋಂಕು
ಕಲಬುರಗಿಯಲ್ಲಿ ಕೊರೋನಾ ಸೋಂಕಿನಿಂಧ ಮೃತಪಟ್ಟ 70 ವರ್ಷದ ವೃದ್ಧನ ಸೊಸೆ ಮತ್ತು ಆಯಾಗೆ ಕೂಡ ಸೋಂಕು ದೃಢಪಟ್ಟಿದೆ. ಕಲಬುರಗಿಯ ವೃದ್ಧನ 24 ವರ್ಷದ ಸೊಸೆ ಮತ್ತು ಆತನೊಂದಿಗೆ ಸಂಪರ್ಕ ಹೊಂದಿದ್ದ 38 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ

SCROLL FOR NEXT