ರಾಜ್ಯ

'ಡಾ.ರಾಜ್ ಪುಣ್ಯಸ್ಮರಣೆ- ನಮನ ಸಲ್ಲಿಸಿದ ಸಿಎಂ ಬಿಎಸ್ ಯಡಿಯೂರಪ್ಪ

Srinivasamurthy VN

ಬೆಂಗಳೂರು: ವರನಟ ದಿ.ಡಾ.ರಾಜ್‌ಕುಮಾರ್ ಅವರ 14 ನೇ ಪುಣ್ಯಸ್ಮರಣೆ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮನ ಸಲ್ಲಿಸಿದ್ದಾರೆ.

ಕನ್ನಡದ ಅಸ್ಮಿತೆಯ ಸಂಕೇತ, ಕನ್ನಡಿಗರ ಹೃದಯ ಸಾಮ್ರಾಟ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು. ಕನ್ನಡ ರಂಗಭೂಮಿ, ಚಲನಚಿತ್ರಗಳ ಮೂಲಕ ಡಾ.ರಾಜ್ ಅವರು ಕನ್ನಡ ನಾಡು-ನುಡಿಗೆ ಸಲ್ಲಿಸಿದ ಅನುಪಮ  ಸೇವೆಯನ್ನು ಸದಾ ಕಾಪಿಟ್ಟುಕೊಳ್ಳೋಣ ಎಂದು ಯಡಿಯೂರಪ್ಪ ಕರೆ ನೀಡಿದ್ದಾರೆ.

ಸಮಾಧಿಗೆ ಗೌರವ ಸಲ್ಲಿಸಿದ ಶಿವಣ್ಣ
ವರನಟ ದಿ.ಡಾ.ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ 14 ವರ್ಷಗಳೇ ಸಂದಿವೆ. ಕೊರೊನಾ ಸೋಂಕು ಇದೀಗ ರಾಜ್ ಕುಮಾರ್ ಪುಣ್ಯಸ್ಮರಣೆಗೂ ತಟ್ಟಿದ್ದು, ಪ್ರತಿವರ್ಷ ಸಾವಿರಾರು ಅಭಿಮಾನಿಗಳು ರಾಜ್ ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಸೇರಿ ರಾಜ್ ಸಮಾಧಿಗೆ ತೆರಳಿ  ಪೂಜೆ‌ನಮನ ಸಲ್ಲಿಸುತ್ತಿದ್ದರು. ಆದರೆ ಈ ವರ್ಷ ವರನಟನ ಪುಣ್ಯಸ್ಮರಣೆಗೂ ಕರಾಳ ಛಾಯೆಯಂತೆ ಆಚರಿಸಿದೆ. 14ನೇ‌ ಪುಣ್ಯಸ್ಮರಣೆಯಾದ ಇಂದು ಬೆಳಿಗ್ಗೆ ರಾಜ್ ಕುಮಾರ್ ಹಿರಿಯ ಪುತ್ರ ಚಂದನ ವನದ ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್ ಒಬ್ಬರೇ ತಂದೆಯ ಸ್ಮಾರಕಕ್ಕೆ ತೆರಳಿ  ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶಿವರಾಜ್‍ಕುಮಾರ್, ನಾವು ಅಪ್ಪಾಜಿ ಇಲ್ಲ ಎಂದು ಅಂದುಕೊಂಡಿಲ್ಲ. ಅವರ ಕಣ್ಣುಗಳು ಜಗತ್ತನ್ನು ನೋಡುತ್ತಿವೆ. ಲಾಕ್‍ಡೌನ್ ಆಗಿದ್ದರಿಂದ ಎಲ್ಲರೂ ಬರದೇ ಕೆಲವರು ಅಪ್ಪಾಜಿ ಸಮಾಧಿಗೆ ಬಂದು ನಮಸ್ಕರಿಸಿದ್ದೇವೆ ಎಂದು ಹೇಳಿದರು. ಇದೇ ವೇಳೆ ಕೊರೋನಾ  ವೈರಸ್ ಮಹಾಮಾರಿ ತಡೆಗೆ ಸಾಮಾಜಿಕ ಅಂತರವೇ ಮದ್ದು. ಯಾರು ಹೆಚ್ಚಾಗಿ ಸೇರಬೇಡಿ. ಜನರು ಸಹಕಾರ ಕೊಟ್ಟರೆ ಅದಷ್ಟು ಬೇಗ ಕೊರೋನಾ ಮಹಾಮಾರಿಯಿಂದ ಮುಕ್ತಿ ಪಡೆಯಬಹುದು. ಸಿನಿಮಾ ಇಂಡಸ್ಟ್ರಿಯಿಂದ ಯಾರು ಕೂಡ ಇಲ್ಲಿಯ ತನಕ ಕಷ್ಟ ಅಂತ ಸಂಪರ್ಕ ಮಾಡಿಲ್ಲ.  ಲಾಕ್‍ಡೌನ್ ತಿಳಿಗೊಂಡ ನಂತರ ಸಿನಿಮಾ ಯೂನಿಟ್ ಅವರನ್ನ ಸಂಪರ್ಕ ಮಾಡಿ ಸಹಾಯ ಮಾಡುತ್ತೇವೆ ಎಂದು ಹೇಳಿದರು.

SCROLL FOR NEXT