ರಾಜ್ಯ

ಎಪಿಎಲ್, ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ

Srinivasamurthy VN

ಬೆಂಗಳೂರು: ಕೊರೊನಾ ಲಾಕ್‌ ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ ನೀಡುವುದಾಗಿ ಘೋಷಿಸಿದೆ.

ಸರ್ಕಾರದಿಂದ ಮಹತ್ವದ ಘೋಷಣೆಯಾಗಿದ್ದು, ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರಿಗೂ ಏಪ್ರಿಲ್ ನಿಂದ ಜೂನ್ ವರೆಗೆ ಅಕ್ಕಿ ವಿತರಣೆ ಮಾಡಲು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ  ವಿತರಣೆ, ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿ ಕೆಜಿ ಗೆ ರೂ 15 ರಂತೆ 10 ಕೆಜಿ ಅಕ್ಕಿ ವಿತರಿಸುವುದಾಗಿ ಹೇಳಿದೆ. 

ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಸರ್ಕಾರ ಹಣ ನಿಗದಿ ಮಾಡಿದೆ. ಹೀಗಾಗಿ ಎಪಿಎಲ್ ಕಾರ್ಡ್ ಅರ್ಜಿದಾರರು ಪ್ರತಿ ಕೆಜಿಗೆ 15 ರೂ.ರಂತೆ 10 ಕೆಜಿ ಅಕ್ಕಿ ಖರೀದಿಸಬಹುದಾಗಿದೆ.

ಈವರೆಗೂ ಬಿಪಿಎಲ್ ಕಾರ್ಡ್‍ಗೆ 1,88,152 ಕುಟುಂಬಗಳು ಹಾಗೂ ಎಪಿಎಲ್ ಕಾರ್ಡ್‍ಗೆ 61,333 ಕುಟುಂಬಗಳು ಅರ್ಜಿ ಸಲ್ಲಿಸಿವೆ. ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

SCROLL FOR NEXT