ರಾಜ್ಯ

ಕೋವಿಡ್-19 ಮಧ್ಯೆ ಸೋಂಕು ನಿವಾರಕ ಸುರಂಗಗಳಿಗೆ ಹೆಚ್ಚಿದ ಬೇಡಿಕೆ

Sumana Upadhyaya

ತುಮಕೂರು: ಕೋವಿಡ್-19 ನಿಂದ ಬಹುತೇಕ ಉದ್ಯಮಗಳಿಗೆ ತೊಂದರೆಯಾದರೆ ಸೋಂಕು ನಿವಾರಕ ಸುರಂಗಗಳನ್ನು ಮಾಡುತ್ತಿರುವ ಘಟಕಗಳಿಗೆ ಅವಕಾಶಗಳ ಬಾಗಿಲು ತೆರೆದಿವೆ. ಇಂತಹ ಸೋಂಕು ನಿವಾರಕ ಸುರಂಗಗಳನ್ನು ದೇಶದ ಹಲವು ಕಡೆಗಳಲ್ಲಿ ಈಗಾಗಲೇ ತೆರೆಯಲಾಗಿದೆ.

ಗಜಿಯಾಬಾದ್ ನಲ್ಲಿ ಈ ರೀತಿ ಸುರಂಗ ತಯಾರಿಸಿದ ಬೆಂಗಳೂರು ಮೂಲದ ಸಂಸ್ಥೆ 99 ಸಾವಿರ ರೂಪಾಯಿ ದರ ವಿಧಿಸಿದೆ. ಅದರ ಜೊತೆಗೆ ಶೇಕಡಾ 18ರಷ್ಟು ಜಿಎಸ್ ಟಿ. ಈ ಸೋಂಕುನಿವಾರಕ ಸುರಂಗವನ್ನು ಪೂರೈಸಲು 10ರಿಂದ 12 ದಿನಗಳು ಬೇಕಾಗಿದ್ದು 45 ದಿನಗಳ ಅವಧಿಯನ್ನು ಇದು ಹೊಂದಿರುತ್ತದೆ.

ಪುಣೆಯಲ್ಲಿರುವ ಮತ್ತೊಂದು ಕಂಪೆನಿ ಮೂರು ವಿವಿಧ ಆಕಾರಗಳ ಸುರಂಗವನ್ನು ಪರಿಚಯಿಸಿದ್ದು ಅವುಗಳ ಬೆಲೆ 13,800 ರೂಪಾಯಿ, 24,400 ರೂಪಾಯಿ ಮತ್ತು 29 ಸಾವಿರದ 500 ರೂಪಾಯಿಗಳಾಗಿವೆ. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ಕೊರೋನಾ ಸೋಂಕು ಅಧಿಕವಾಗಿರುವುದರಿಂದ ಅಲ್ಲಿಂದ ತರಿಸಲು ಗ್ರಾಹಕರು ಹಿಂದೆ ಮುಂದೆ ನೋಡುತ್ತಿದ್ದಾರೆ.

ಪಾವಗಡದ ಸ್ವಾಮಿ ವಿವೇಕಾನಂದ ಆಂತರಿಕ ಗ್ರಾಮೀಣ ಆಸ್ಪತ್ರೆಗೆ ಸುರಂಗ ಪೂರೈಸಿದ ಸಂಸ್ಥೆ ಸಂಪೂರ್ಣ ಸ್ವಯಂಚಾಲಿತ ಸುರಂಗವಾಗಿದೆ. ಈ ಮಧ್ಯೆ, ತುಮಕೂರು ಜಿಲ್ಲಾಡಳಿತ ಸಿದ್ದಗಂಗಾ ತಾಂತ್ರಿಕ ಸಂಸ್ಥೆಯ ಅಂತಿಮ ವರ್ಷದ ಬಿ ಇ ವಿದ್ಯಾರ್ಥಿ ಚಿದಾನಂದ ಹೆಚ್ ಎನ್ ಅವರ ನೆರವಿನೊಂದಿಗೆ ಕಡಿಮೆ ವೆಚ್ಚದ ಅರೆ ಸ್ವಯಂಚಾಲಿತ ಸುರಂಗವನ್ನು ವಿನ್ಯಾಸಗೊಳಿಸಿದೆ. ಈ ಯೋಜನೆ ಮೇಲೆ ಅವರು ಸುಮಾರು 50 ಸಾವಿರ ರೂಪಾಯಿ ವೆಚ್ಚ ಮಾಡಿದ್ದು ಸೋಂಕುರಹಿತ ಟ್ಯಾಂಕಿಗೆ 500 ಲೀಟರ್ ಸಾಮರ್ಥ್ಯದ ಟ್ಯಾಂಕ್ ಒದಗಿಸಿದೆ.

ಬೆಂಗಳೂರು ಮೂಲದ ಸಂಸ್ಥೆಯೊಂದು ಈ ಸುರಂಗಗಳಲ್ಲಿ ಬಳಸಲು ಜೈವಿಕ ದ್ರಾವಕವನ್ನು ಕಂಡುಹಿಡಿದಿದೆ. ಇದು ಶಿಡ್ಲಘಟ್ಟದ ರೇಷ್ಮೆ ಕೋಕೂನ್ ಮಾರುಕಟ್ಟೆಯ ಹೊರಗಿನ ಸುರಂಗಕ್ಕೆ ದ್ರಾವಕವನ್ನು ಪೂರೈಸಿದೆ.

SCROLL FOR NEXT