ರಾಜ್ಯ

ಮಕ್ಕಳನ್ನು ಪೋಷಕರ ಮಡಿಲು ಸೇರಿಸಿದ ಮಂಗಳೂರು ಪೊಲೀಸರು, ವ್ಯಾಪಕ ಮೆಚ್ಚುಗೆ

Lingaraj Badiger

ಮಂಗಳೂರು: ಕೇರಳ ಮೂಲದ ಇಬ್ಬರು ಮಕ್ಕಳನ್ನು ಅವರ ಪೋಷಕರ ಜೊತೆ ಸೇರಿಸುವ ಮೂಲಕ ಮಂಗಳೂರಿನ ಪೂರ್ವ (ಕದ್ರಿ) ಪೊಲೀಸ್ ಠಾಣೆ ಎಎಸ್‌ಐ ಸಂತೋಷ್ ಕುಮಾರ್ ಕಟೀಲ್‌ ಮಾನವೀಯತೆ ಮೆರೆದಿದ್ದಾರೆ.

ರಜಾದಿನಗಳಲ್ಲಿ ಮಕ್ಕಳು ಮಂಗಳೂರಿಗೆ ಬಂದಿದ್ದರು. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಗಡಿ ಮುಚ್ಚಿದ ನಂತರ ಮಕ್ಕಳಿಗೆ ಅವರ ಊರಿಗೆ ಮರಳಲು ಸಾಧ್ಯವಾಗಿರಲಿಲ್ಲ.

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಮೂಲದ ಇಬ್ಬರು ಮಕ್ಕಳು ಮಂಗಳದೇವಿಯಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿದ್ದರು ಮತ್ತು ಅವರ ಹೆತ್ತವರೊಂದಿಗೆ ಸೇರಲು ಉತ್ಸುಕರಾಗಿದ್ದರು. ಮಕ್ಕಳ ಸಂಬಂಧಿಕರು ಈ ವಿಷಯವನ್ನು ಎಎಸ್‌ಐ ಗಮನಕ್ಕೆ ತಂದಿದ್ದರು ಮತ್ತು ಈ ವಿಷಯದಲ್ಲಿ ಅವರ ಸಹಾಯವನ್ನು ಕೋರಿದ್ದರು.

ಹಿರಿಯರೊಂದಿಗೆ ಸಮಾಲೋಚಿಸಿದ ನಂತರ, ಎಎಸ್ಐ ಮಕ್ಕಳನ್ನು ತಲಪಾಡಿ ಗಡಿಯವರೆಗೆ ತನ್ನ ವಾಹನದಲ್ಲಿ ಕರೆದೊಯ್ಯಲು ನಿರ್ಧರಿಸಿದರು. ಬಳಿಕ ಗಡಿಯನ್ನು ಭೇಟಿ ಮಾಡಲು ಕೇರಳ ಸರ್ಕಾರದಿಂದ ಅನುಮತಿ ಪಡೆಯುವಂತೆ ಪೋಷಕರಿಗೆ ಸೂಚಿಸಲಾಯಿತು.

ಅಂತಿಮವಾಗಿ, ಗಡಿಯಲ್ಲಿ ಮಕ್ಕಳು ತಮ್ಮ ಹೆತ್ತವರೊಂದಿಗೆ ಮತ್ತೆ ಒಂದಾದರು. ಎಎಸ್‌ಐ ಅವರ ಈ ಕಾರ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಪೊಲೀಸ್ ಇಲಾಖೆಯ ಸಾಗರ್ ವಾಹನದಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ವೈದ್ಯಕೀಯ ನೆರವು ಪಡೆಯಲು ಕೂಡ ಕುಮಾರ್ ಸಹಾಯ ಮಾಡಿದ್ದಾರೆ.

ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಅವರು ಈ ಮಾನವೀಯ ಕಾರ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಮೆಚ್ಚುಗೆಯ ಪ್ರಮಾಣಪತ್ರವನ್ನು ನೀಡಿದ್ದಾರೆ ಮತ್ತು ಅವರನ್ನು "ದಿನದ ಕರೋನಾ ಯೋಧ" ಎಂದು ಬಣ್ಣಿಸಿದ್ದಾರೆ.

SCROLL FOR NEXT