ರಾಜ್ಯ

ಲಾಕ್ ಡೌನ್: ಪೂಜಾ ಕೆಲಸಗಳು ಇಲ್ಲದೆ ಸಂಕಷ್ಟದಲ್ಲಿ ಅರ್ಚಕರು!

Nagaraja AB

ಬೆಂಗಳೂರು: ಲಾಕ್ ಡೌನ್ ನಿಂದಾಗಿ ದೇವಾಲಯಗಳು ಮುಚ್ಚಿದ್ದು, ಅರ್ಚಕರು ದಿನನಿತ್ಯದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಕಷ್ಟಪಡುವಂತಾಗಿದೆ. ದತ್ತಿ ಇಲಾಖೆಯಡಿ ರಾಜ್ಯದಲ್ಲಿ 34,000 ಕ್ಕೂ ಹೆಚ್ಚು ದೇವಾಲಯಗಳಿವೆ

ಈ ಪೈಕಿ 175 ಎ ದರ್ಜೆ (ವಾರ್ಷಿಕವಾಗಿ 25 ಲಕ್ಷಕ್ಕೂ ಅಧಿಕ ಆದಾಯ ಗಳಿಸುವ ದೇವಾಲಯಗಳು) 158 ಬಿ ದರ್ಜೆ ( ವಾರ್ಷಿಕ 5 ಲಕ್ಷಿದಿಂದ 25 ಲಕ್ಷ ನಡುವೆ ಆದಾಯ ಗಳಿಸುವ ದೇವಾಲಯಗಳು) ಉಳಿದ ದೇವಾಲಯಗಳು ಸಿ ದರ್ಜೆಗಳಾಗಿವೆ ( 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವಂತಹವುಗಳು)  ಸಹಸ್ರಾರು ದೇವಾಲಯಗಳು ಟ್ರಸ್ಟ್ ,ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. 

ವಿಜಯ್ ಆಚಾರ್ಯ (ಹೆಸರು ಬದಲಾಯಿಸಲಾಗಿದೆ) ಮನೆಗಳಲ್ಲಿ ನಡೆಯುವ ಹೋಮ, ಹವನ ಮತ್ತಿತರ ಪೂಜಾ ಕಾರ್ಯಗಳಿಂದ ಬದುಕು ಸಾಗಿಸುತ್ತಿದ್ದರು. ಈಗ ಎಲ್ಲಿಯೂ ಹೋಗದಂತಾಗಿದೆ. ಸರ್ಕಾರದ ಯಾವುದೇ ಯೋಜನೆಗಳು ನಮ್ಮಗಿಲ್ಲ, ಏನು ಮಾಡೋದು ಎಂಬುದು ಗೊತ್ತಾಗುತ್ತಿಲ್ಲ, ಭಕ್ತಾಧಿಯೊಬ್ಬರು 10 ಕಿಲೋ ಅಕ್ಕಿ ಮತ್ತು 2 ಕೆಜಿ ಬೆಳೆ ಕಳುಹಿಸಿದ್ದಾರೆ. ಆದರೆ, ತರಕಾರಿ ಮತ್ತಿತರ ಅಗತ್ಯ ವಸ್ತುಗಳನ್ನು ಪೂರೈಸಿಕೊಳ್ಳಲು ಹಣದ ಅಗತ್ಯವಿರುವುದಾಗಿ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ  ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಎ ಹಾಗೂ ಬಿ ದರ್ಜೆಯ ದೇವಾಲಯಗಳಲ್ಲಿ ಕೆಲಸ ಮಾಡುವ ಆರ್ಚಕರಿಗೆ ಸಂಬಳವನ್ನು ನಿಗದಿಪಡಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರು ಹಾಗೂ ಅರ್ಚಕರಿಗೆ ಸಂಬಳ ನಿಲ್ಲಿಸದಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.

ಸಿ ದರ್ಜೆಯ ದೇವಾಲಯಗಳಲ್ಲಿ ಪೂಜಾ ಕಾರ್ಯಗಳಲ್ಲಿ ತೊಡಗಿರುವ ಅರ್ಚಕರು ಭಕ್ತಾಧಿಗಳ ಮೇಲೆ ಅವಲಂಬಿತರಾಗಿದ್ದಾರೆ. ಅಂತವರಿಗೆ ಆಹಾರ ಧಾನ್ಯ ಒದಗಿಸುವಂತೆ ಕಾರ್ಮಿಕ ಇಲಾಖೆಯೊಂದಿಗೆ ಮಾತನಾಡಿದ್ದೇವೆ. ಈ ದೇವಾಲಯಗಳಲ್ಲಿನ ಆರ್ಚಕರು, ವಾದ್ಯ ನುಡಿಸುವವರು, ಮತ್ತಿತರ ಸಿಬ್ಬಂದಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ನೀಡುವಂತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. 

SCROLL FOR NEXT