ರಾಜ್ಯ

ನರೇಗಾ ಕೆಲಸದಲ್ಲಿ ಸಾಮಾಜಿಕ ಅಂತರ: ಒಂದೇ ವೇಳೆ ಐದಕ್ಕಿಂತ ಹೆಚ್ಚು ಜನರು ಕೆಲಸ ಮಾಡುವಂತಿಲ್ಲ!

Nagaraja AB

ಬೆಂಗಳೂರು: ಕೌಶಲ್ಯ ರಹಿತ ಕಾರ್ಮಿಕರಿಗೆ ಕೆಲಸದ ಅಗತ್ಯವಿದೆ ಎಂಬುದನ್ನು ಖಾತ್ರಿ ಪಡಿಸಿಕೊಂಡು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಸರ್ಕಾರ ನೀಡಲು ಸರ್ಕಾರ ನಿರ್ಧರಿಸಿದೆ. ಆದಾಗ್ಯೂ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಒಂದೇ ಸಮಯದಲ್ಲಿ ಐದು ಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸಕ್ಕೆ ಹಾಜರಾಗಬಾರದು ಎಂದು ಸರ್ಕಾರ ಹೇಳಿದೆ 

ನರೇಗಾ ಕೆಲಸಗಾರರಿಗೆ ದಿನಭತ್ಯೆಯನ್ನು 249 ರೂಪಾಯಿಯಿಂದ 275 ರೂಪಾಯಿ ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. 

ಮನರೇಗಾ ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೆಲಸಗಳನ್ನು ಆರಂಭಿಸಿದೆ. ಕೆಲಸಗಾರರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂದು ನಾವು ಒತ್ತಾಯಿಸುತ್ತಿಲ್ಲ, ಒಂದೇ ಸಮಯದಲ್ಲಿ ಐದಕ್ಕಿಂತ ಹೆಚ್ಚು ಜನರು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಎಲ್ ಕೆ ಅತಿಕ್ ತಿಳಿಸಿದರು 

ಕೆಲಸಗಾರರಿಗೆ ಗುರುತಿನ ಚೀಟಿ, ಸುರಕ್ಷತಾ ಮಾಸ್ಕ್ ಗಳನ್ನು ನೀಡಲಾಗುವುದು, ಪಂಚಾಯಿತಿ ವ್ಯಾಪ್ತಿಯಲ್ಲಿ ಅರ್ಹರಿಗೆ ಕೆಲಸ ಮಾಡುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಕೃಷಿ ಆಧಾರಿತ ಕೆಲಸಗಳಿಗೆ ಆದ್ಯತೆ ನೀಡುವಂತೆ ಪಂಚಾಯಿತಿಗಳಿಗೆ ಹೇಳಲಾಗುತ್ತಿದೆ. ಜಲಾನಯನ ಮತ್ತು ಕಂದಕ ನಿರ್ಮಾಣವಲ್ಲದೆ, ಕೊಳಗಳು, ಜಾನುವಾರುಗಳು ಮತ್ತು ರೈತರಿಗೆ ಸಹಾಯ ಮಾಡುವಂತಹ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅತಿಕ್ ಹೇಳಿದರು.

SCROLL FOR NEXT