ರಾಜ್ಯ

ಅಗತ್ಯಸೇವೆಗಳಲ್ಲಿರುವ ಜನರನ್ನು ಪರೀಕ್ಷೆಗೊಳಪಡಿಸುವ ಅಗತ್ಯವಿದೆ: ಡಿಸಿಎಂ ಅಶ್ವತ್ಥ್ ನಾರಾಯಣ್

Manjula VN

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ನಲ್ಲಿ ವೈರಸ್ ದೃಢಪಟ್ಟ ಪ್ರಕರಣ ಎಲ್ಲರನ್ನೂ ಭೀತಿಗೊಳಗಾಗುವಂತೆ ಮಾಡಿದ್ದು, ಅಗತ್ಯಸೇವೆಗಳ ಪೂರೈಕೆ ಮಾಡುವ ಕೆಲಸದಲ್ಲಿರುವ ಜನರನ್ನು ಯಾದೃಚ್ಛಿಕವಗಿ ಪರೀಕ್ಷೆಗೊಳಪಡಿಸುವ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗತ್ಯ ಸೇವೆಗಳನ್ನು ಪೂರೈಕೆ ಮಾಡುತ್ತಿರುವ ಕಂಪನಿಗಳು ಹಾಗೂ ಮನೆ ಬಾಗಿಲಿಗೆ ವಸ್ತುಗಳನ್ನು ಪೂರೈಸುತ್ತಿರುವವರಲ್ಲಿ ಲಕ್ಷಣಗಳು ಕಂಡು ಬರದೇ ಇದ್ದರೂಕೂಡ ಯಾದೃಚ್ಛಿಕವಾಗಿ ಪರೀಕ್ಷೆಗೊಳಪಡಿಸಬೇಕೆಂದು ಹೇಳಿದ್ದಾರೆ. 

ಇದು ಕೇವಲ ನನ್ನ ಸಲಹೆಯಷ್ಟೇ. ಈ ಕುರಿತು ಕೋವಿಡ್ ಟಾಸ್ಕ್ ಫೋರ್ಸ್ ನಿರ್ಧಾರ ಕೈಗೊಳ್ಳಲಿದೆ. ಎಲ್ಲಾ ಸಂಸ್ಥೆಗಳಿಗೂ ಈಗಾಗಲೇ ಕಠಿಣ ನಿರ್ದೇಶನಗಳನ್ನು ನೀಡಲಗಿದೆ. ಈ ರೀತಿಯಿಂದಲೇ ವೈರಸ್ ಹೆಚ್ಚಿನ ಸಂಖ್ಯೆಯಲ್ಲಿ ಹರಡುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

SCROLL FOR NEXT